LATEST NEWS
ಮುಂಬೈ – ಇನ್ಸ್ಟಾಗ್ರಾಂ ನಲ್ಲಿ 56 ಲಕ್ಷ ಪಾಲೋವರ್ಸ್ – ಆದ್ರೆ ಸಿಕ್ಕಿದ್ದು ಬರೇ 153 ವೋಟ್
ಮುಂಬೈ ನವೆಂಬರ್ 23: ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಜನ ಪಾಲೋವರ್ಸ್ ಹೊಂದಿದ್ದರು, ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳು ಬೇರೆ ಬೆರೆನೆ ಎಂದು ಮಹಾರಾಷ್ಟ್ರ ಚುನಾವಣೆ ತೋರಿಸಿಕೊಟ್ಟಿದೆ.
ಈ ಭಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ನಟ ಆಜಾಜ್ ಖಾನ್ ಸ್ಪರ್ಧೆ ಮಾಡಿದ್ದರು. ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟ ಆಗಿರುವ ಅಜಾಜ್ ಖಾನ್ ಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಅವರ ಇನ್ಸ್ಟಾಗ್ರಾಂ ಒಂದರಲ್ಲೇ ಅವರಿಗೆ 56 ಲಕ್ಷ ಜನ ಪಾಲೋವರ್ಸ್ ಇದ್ದಾರೆ. ಅವರು ಸಂಸದ ಚಂದ್ರಶೇಖರ್ ಅಜಾದ್ ರಾವಣ ಅವರ ‘ಆಜಾದ್ ಸಮಾಜ್ ಪಾರ್ಟಿ’ಯಿಂದ ಸ್ಪರ್ಧಿಸಿದ್ದರು. ಆದರೆ, ವಿಚಿತ್ರವೆಂದರೆ ಇಂದು ಪ್ರಕಟವಾದ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಆಜಾಜ್ ಅವರು ಕೇವಲ 153 ಮತಗಳನ್ನು ಪಡೆದಿದ್ದಾರೆ. ಇನ್ನೊಂದು ತಮಾಷೆ ಅಂದರೆ ಅಜಾಜ್ ಖಾನ್ ಗಿಂತಲೂ ನೋಟಾಗೆ ಹೆಚ್ಚು ಮತ ಬಿದ್ದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಜಾಜ್ ಖಾನ್ ಸೋಲು ಸಖತ್ ವೈರಲ್ ಆಗಿದೆ.