Connect with us

    FILM

    ಬಿಗ್ ಬಾಸ್ ಒಟಿಟಿ​ ಮಾಜಿ ಸ್ಪರ್ಧಿ ಸೋನು ಗೌಡ ಕಾರು ಅಪಾರ್ಟ್ ಮೆಂಟ್ ಪಿಲ್ಲರ್ ಗೆ ಡಿಕ್ಕಿ

    ಬೆಂಗಳೂರು ಫೆಬ್ರವರಿ 3: ಕನ್ನಡ ಬಿಗ್ ಬಾಸ್ ಒಟಿಟಿ​ ಮಾಜಿ ಸ್ಪರ್ಧಿ, ಟಿಕ್​ಟಾಕ್​ ರೀಲ್ಸ್​​ ಸ್ಟಾರ್​​ ಸೋನು ಗೌಡ ಅವರ ಕಾರು ಅಪಾರ್ಟ್ ಮೆಂಟ್ ನ ಪಿಲ್ಲರ್ ಗುದ್ದಿದ ಘಟನೆ ನಡೆದಿದೆ.


    ಪಾರ್ಕಿಂಗ್‌ನಿಂದ ಕಾರು ತೆಗೆಯುವಾಗ ಪಿಲ್ಲರ್‌ಗೆ ಡಿಕ್ಕಿ ಹೊಡೆದು ವಾಹನ ನಜ್ಜುಗುಜ್ಜಾಗಿದೆ. ಆದರೆ ಕಾರನ್ನು ಸೋನು ಗೌಡ ಅವರೇ ಚಲಾಯಿಸಿದಾರ ಅಥವಾ ಬೇರೆ ಯಾರಾದರೂ ಚಲಾಯಿಸಿ ಡಿಕ್ಕಿ ಹೊಡೆದರಾ ಎಂಬ ಮಾಹಿತಿ ಸಿಕ್ಕಿಲ್ಲ. ಸದ್ಯ ನಗರದ ಗೊಲ್ಲರ ಪಾಳ್ಯ ಹೊಸಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಕೆಎ 43 ಎನ್‌ 4757 ನಂಬರ್‌ನ ಶಿಫ್ಟ್ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಜೊತೆಗೆ ಕಾರು ಡಿಕ್ಕಿ ಹೊಡೆದ ಪಿಲ್ಲರ್ ಸಹ ಹಾನಿಯಾಗಿದೆ.


    ಟಿಕ್‌ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply