FILM
ಬಿಗ್ ಬಾಸ್ ನಲ್ಲಿ ಹನುಮಂತ ಗೆದ್ದ 50 ಲಕ್ಷದಲ್ಲಿ ಶೇಕಡ 30 ರಷ್ಟು ಟ್ಯಾಕ್ಸ್
ಬೆಂಗಳೂರು ಜನವರಿ 29: ಬಿಗ್ ಬಾಸ್ ಸೀಸನ್ 11 ರ ಕಿರೀಟವನ್ನು ಹಳ್ಳಿ ಹುಡುಗ ಹನುಮಂತು ಗೆದ್ದು ಬೀಗಿದ್ದಾನೆ. ವೈಲ್ಡ್ ಕಾರ್ಡ್ ಎಂಟ್ರಿಯಾದರೂ ಅತ್ಯುತ್ತಮವಾಗಿ ಆಡಿ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾನೆ. ಬಿಗ್ ಬಾಸ್ ಟ್ರೋಪಿ ಜೊತೆಗೆ 50 ಲಕ್ಷ ಕ್ಯಾಶ್ ಪ್ರೈಜ್ ಗೆದ್ದಿರುವ ಹನುಮಂತ ಗೆ ಸಂಪೂರ್ಣ ಹಣ ಮಾತ್ರ ಸಿಗುವುದಿಲ್ಲ.
ಬಿಗ್ ಬಾಸ್ ನಲ್ಲಿ ಗೆದ್ದ 50 ಲಕ್ಷ ಹಣಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಇಂದ ಈ ತೆರಿಗೆ ಅನ್ವಯ ಆಗುತ್ತದೆ.
ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್ ಆದ ತ್ರಿವಿಕ್ರಂ ಅವರೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 15 ಲಕ್ಷ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಅವರಿಗೆ 10,50,000 ಮಾತ್ರ ಸಿಗಲಿದೆ. ಉಳಿದ ಮೊತ್ತ ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ. ಇನ್ನು, ರಜತ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, ಅವರ ಕೈ ಸೇರೋದು 7 ಲಕ್ಷ ರೂಪಾಯಿ ಮಾತ್ರ