FILM
ಲಾಯರ್ ಜಗದೀಶ್ ವಿರುದ್ದ ಧನರಾಜ್ ಆಚಾರ್ – ಕೂತ್ಕೊತೀಯಾ.. ನೀನು ಯಾರು ಹೇಳೋಕೆ

ಬೆಂಗಳೂರು ಅಕ್ಟೋಬರ್ 02: ಬಿಗ್ ಬಾಸ್ ಸೀಸನ್ 11 ಈಗಾಗಲೇ ಸುದ್ದಿಯಲ್ಲಿದೆ. ಪ್ರಾರಂಭದಿಂದಲೂ ಬರೀ ಜಗಳದಲ್ಲೇ ಇರುವ ಬಿಗ್ ಬಾಸ್ ಸೀಸನಲ್ಲಿ ಇದೀಗ ನಾಮಿನೇಶನ್ ಬಿಸಿ ಜೋರಾಗಿದೆ.
ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್ ಆಗಿದ್ದಾರೆ. ಆದರೆ ನಾಮಿನೇಟ್ ಆದ ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ. ಧನ್ರಾಜ್ ಆಚಾರ್ ಟಾಸ್ಕ್ ರೆಫ್ರಿಯಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್ ಮತ್ತು ಯಮುನಾ ಟಾಸ್ಕ್ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್ ರೆಫ್ರಿ ಮತ್ತು ಜಗದೀಶ್ ನಡುವೆ ಜಗಳ ಶುರುವಾಗಿದೆ.

ಧನ್ರಾಜ್ ಮತ್ತು ಜಗದೀಶ್ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್ರಾಜ್ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್ರಾಜ್ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.
ನಾಮಿನೇಷನ್ ಪಿಕ್ಚರ್ ವಾರ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಪ್ರತಿರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/grbzTIkWWI— Colors Kannada (@ColorsKannada) October 2, 2024