Connect with us

  FILM

  ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಹೊಸ ಕಾರು ಅಪಘಾತ

  ತುಮಕೂರು ಮಾರ್ಚ್ 13: ಕನ್ನಡದ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ಇದೀಗ ಗಿಚ್ಚ ಗಿಲಿ ಗಿಲಿ ಕಾಮಿಡಿಶೋ ನಲ್ಲಿ ಭಾಗವಹಿಸುತ್ತಿರುವ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ.


  2 ವಾರಗಳ ಹಿಂದೆಯಷ್ಟೇ ತುಕಾಲಿ ಸಂತೋಷ ಹೊಸ ಕಾರು ಖರೀದಿಸಿದ್ದರು, ಈ ಕಾರಿಗೆ ಆಟೋ ಒಂದು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್​ ಅವರು ಹೋಗುತ್ತಿದ್ದರು. ಅದೇ ವೇಳೆ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ತುಕಾಲಿ ಸಂತೋಷ್​ ಅವರ ಕಾರಿನ ಬಲಗಡೆಗೆ ಆಟೋ ಡಿಕ್ಕಿ ಹೊಡೆದಿದೆ. ಇದರಿಂದ ಕಿಯಾ ಕಾರು ಜಖಂ ಆಗಿದೆ. ಆಟೋ ಕೂಡ ಭಾಗಶಃ ಜಖಂ ಆಗಿದೆ. ಈ ಅಪಘಾತದಲ್ಲಿ ಯಾವುದೇ ಪ್ರಾಯಾಪಾಯ ಸಂಭವಿಸಿಲ್ಲ.

  Share Information
  Advertisement
  Click to comment

  You must be logged in to post a comment Login

  Leave a Reply