Connect with us

FILM

ಬಿಗ್ ಬಾಸ್ 11 ರ ಸ್ಪರ್ಧಿಗಳ ಪೋಟೋ ಲೀಕ್

ಬೆಂಗಳೂರು ಸೆಪ್ಟೆಂಬರ್ 26: ಬಿಗ್ ಬಾಸ್ 11 ರ ಸೀಸನ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಕಲರ್ಸ್ ಕನ್ನಡ ಹೊಸ ಪ್ರೋಮೋ ಒಂದನ್ನು ಬಿಟ್ಟಿದ್ದು, ಅದರಲ್ಲಿ ಸ್ಪರ್ಧಿಗಳು ಯಾರು ಎನ್ನುವ ಕುತೂಹಲವನ್ನು ವೀಕ್ಷಕರಿಗೆ ಬಿಟ್ಟಿದೆ.


ಸೆಪ್ಟೆಂಬರ್ 29 ರಂದು ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಲಿದೆ. ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲು ಕಲರ್ಸ್ ಕನ್ನಡ ನಿರ್ಧರಿಸಿದೆ. ‘ರಾಜಾ ರಾಣಿ’ ಶೋ ಫಿನಾಲೆಯಲ್ಲಿ ಕೆಲವು ಕಂಟೆಸ್ಟ್​ಗಳನ್ನು ರಿವೀಲ್ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲು. ಅದಕ್ಕೂ ಮೊದಲು ಪ್ರೋಮೋ ರಿಲೀಸ್ ಆಗಿದ್ದು, ಸ್ಪರ್ಧಿಗಳ ಮುಖವನ್ನು ತೋರಿಸಲಾಗಿದೆ. ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್​’ಗೆ ಸಂಬಂಧಿಸಿದ ಹೊಸ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಬರೋ ಒಂದು ಕ್ಲಿಪ್​ನಲ್ಲಿ ಕೆಲವು ಸ್ಪರ್ಧಿಗಳ ಫೋಟೋಗಳನ್ನು ತೋರಿಸಲಾಗಿದೆ. ಎಲ್ಲರನ್ನೂ ಬ್ಲರ್ ಮಾಡಲಾಗಿದೆ. ಕೆಂಪು ಲೈಟಿನ ಕತ್ತಲಿನ ಪ್ರೋಮೊದಲ್ಲಿ ಕೆಲ ಸ್ಪರ್ಧಿಗಳ ಮುಖವನ್ನು ಅಸ್ಪಷ್ಟವಾಗಿ ತೋರಿಸಲಾಗಿದೆ.


ರೀಲ್ಸ್‌ ಮೂಲಕ ಖ್ಯಾತಿ ಆಗಿರುವ ಭೂಮಿಕ ಬಸವರಾಜ್‌, ʼಸತ್ಯʼ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್‌, ‘ಕನ್ನಡತಿ’ ಸೀರಿಯಲ್‌ ಖ್ಯಾತಿಯ ಕಿರಣ್ ರಾಜ್, ‘ಒಲವಿನ ನಿಲ್ದಾಣ’ ಸೀರಿಯಲ್‌ ನಟ ಅಕ್ಷಯ್ ನಾಯಕ್, ಎಸ್ ನಾರಾಯಣ್ ಅವರ ಪುತ್ರ ಪಂಕಜ್, , ನಟಿ ಭಾವನಾ ಮೆನನ್‌, ನಟಿ ಪ್ರೇಮಾ ಈ ಪ್ರೋಮೊದಲ್ಲಿ ಇದ್ದಾರೆ ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಆದರೆ ಇದನ್ನು ನೋಡಿ ಕೆಲವರು ನಭಾ ನಟೇಶ್‌, ಭಾವನಾ, ಹರಿಪ್ರಿಯಾ ಇರುವುದು ಡೌಟ್‌ ಎಂದು ಹೇಳುತ್ತಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸ್ಪರ್ಧಿಗಳ ಫೋಟೋಗಳು ಜೋರಾಗಿ ಹರಿದಾಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *