Connect with us

    LATEST NEWS

    ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಹಾಬಾದಿಯಾ ಯೂಟ್ಯೂಬ್ ಚಾನಲ್ ಹ್ಯಾಕ್ – ಎಲ್ಲಾ ವಿಡಿಯೋ ಡಿಲೀಟ್ ಮಾಡಿದ ಹ್ಯಾಕರ್ಸ್

    ಬೆಂಗಳೂರು ಸೆಪ್ಟೆಂಬರ್ 26: ಅನೇಕ ಸೆಲೆಬ್ರೆಟಿಗಳನ್ನು ಸಂದರ್ಶನ ಮಾಡಿ ಪ್ರಖ್ಯಾತಿ ಪಡೆದಿದ್ದ ಭಾರತದ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್ ಚಾನೆಲ್ ಬೀರ್ ಬೈಸೆಪ್ಸ್ ಚಾನೆಲ್ ಹ್ಯಾಕ್ ಮಾಡಿ ಎಲ್ಲಾ ವಿಡಿಯೋಗಳನ್ನು ಡಿಲಿಟ್ ಮಾ಼ಡಲಾಗಿದೆ.


    ರಣವೀರ್ ಅಲ್ಲಾಬಾದಿಯಾ ಭಾರತದ ಪ್ರಸಿದ್ಧ ಯೂಟ್ಯೂಬರ್. ಅವರ ನಿಜವಾದ ಹೆಸರು ಎಂಜಿನಿಯರಿಂಗ್ ಪದವಿ ಪಡೆದಿರುವ ರಣಬೀರ್, ಬೀರ್‌ಬೈಸೆಪ್ಸ್ ಎಂಬ ಹೆಸರಿನ ಸ್ವಂತ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಭಾರತೀಯ ಸೆಲೆಬ್ರಿಟಿಗಳನ್ನು ಆಹ್ವಾನಿಸಿ, ಅವರ ಜೊತೆ ಮಾತನಾಡ್ತಾರೆ. ಕರೀನಾ ಕಪೂರ್, ಜಾನ್ವಿ ಕಪೂರ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅಥವಾ ವಿದ್ಯುತ್ ಜಮ್ವಾಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಜೊತೆ ಮಾತುಕತೆ ನಡೆಸಿರುವ ರಣವೀರ್, ಇಂಟರೆಸ್ಟಿಂಗ್ ವಿಷ್ಯಗಳನ್ನು ಹೊರಹಾಕಿದ್ದರು.


    ರಣವೀರ್ ಅವರ ಮೂರು ಯೂಟ್ಯೂಬ್ ಚಾನೆಲ್ ಗಳನ್ನು ಹ್ಯಾಕರ್ ಹ್ಯಾಕ್ ಮಾಡಿ, ಎಲ್ಲಾ ವಿಡಿಯೋ ಡಿಲೀಟ್ ಮಾಡಿದ್ದಾರೆ. ಎಲೋನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್‌ರಂತಹ ಸೆಲೆಬ್ರಿಟಿಗಳ ಹಳೆಯ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ರಣವೀರ್ ಚಾನೆಲ್ ಹೆಸರನ್ನು@Tesla.event.trump_2024 ಎಂದು ಬದಲಾಯಿಸಿದ್ದಾರೆ. ಅವರ ಎರಡನೇ ಚಾನೆಲ್ ಬೀರ್ ಬೈಸೆಪ್ಸ್ ಹೆಸರನ್ನು @Elon.trump.tesla_live2024 ಎಂದು ಬದಲಿಸಲಾಗಿದೆ.

    ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ, ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರ್ಗರ್ ಮತ್ತು ಫ್ರೈಗಳ ಫೋಟೋ ಪೋಸ್ಟ್ ಮಾಡಿರುವ ರಣವೀರ್, ನನ್ನ ಎರಡು ಮುಖ್ಯ ಚಾನಲ್‌ಗಳು ಹ್ಯಾಕ್ ಆಗಿದೆ ಎಂದು ಬರೆದಿದ್ದಾರೆ. ಇನ್ನೊಂದು ಇನ್ಸ್ಟಾ ಸ್ಟೋರಿಯಲ್ಲಿ, ತಮ್ಮ ಫೋಟೋ ಹಂಚಿಕೊಂಡಿರುವ ಅವರು, ಬಟ್ಟೆಯಿಂದ ಕಣ್ಣು ಮುಚ್ಚಿದ್ದು, ಇದು ನನ್ನ ಯೂಟ್ಯೂಬ್ ವೃತ್ತಿಜೀವನದ ಅಂತ್ಯವೇ? ಎಂದು ಬರೆದಿದ್ದಾರೆ. ರಣವೀರ್ ಟೀಂ, ಡಿಲಿಟ್ ಆಗಿರುವ ಹಾಗೂ ಹ್ಯಾಕರ್ ಕೈ ಸೇರಿರುವ ಯೂಟ್ಯೂಬ್ ಚಾನೆಲ್ ಹಾಗೂ ವಿಡಿಯೋವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply