Connect with us

    FILM

    ಬಿಗ್ ಬಾಸ್ ಮನೆಯ ನರಕವನ್ನು ಪುಡಿ ಪುಡಿ ಮಾಡಿದ ಮುಸುಕುಧಾರಿಗಳು …!!

    ಬೆಂಗಳೂರು ಅಕ್ಟೋಬರ್ 11: ಬಿಗ್ ಬಾಸ್ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್ ಮೇಲೆ ಬಿಗ್ ಬಾಸ್ ಸೀಸನ್ ಆರಂಭವಾಗಿದ್ದು, ಇದೀಗ ನರಕ ವಾಸಿಗಳು ಇರುವ ಪ್ರದೇಶದ ಮೇಲೆ ಕೆಲವು ಮುಸುಕುಧಾರಿಗಳು ಎಂಟ್ರಿ ಕೊಟ್ಟು ಎಲ್ಲವನ್ನು ಪುಡಿ ಪುಡಿ ಮಾಡಿದ್ದಾರೆ.

    ಬಿಗ್ ಬಾಸ್​’ನಲ್ಲಿ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಕ್ರೇನ್​ ಮೂಲಕ ಮನೆ ಒಳಗೆ ದಾಂಡಿಗರು ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಮನೆಯ ಒಳಗೆ ಬಂದ ಅವರು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿದ್ದಾರೆ! ಹಾಗಂತ ಭಯ ಪಡುವ ಅಗತ್ಯವಿಲ್ಲ. ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಇಲ್ಲಿಗೆ ಪೂರ್ಣಗೊಂಡಿದೆ. ಎಲ್ಲರೂ ಇನ್ನು ಒಟ್ಟಾಗಿ ವಾಸಿಸೋಕೆ ಅವಕಾಶ ಮಾಡಿಕೊಡಲಾಗುತ್ತಿದೆ.

    ಕಲರ್ಸ್ ಕನ್ನಡದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ನರಕವನ್ನು ಮುಸುಕುಧಾರಿಗಳು ಪುಡಿ ಪುಡಿ ಮಾಡುವ ವಿಡಿಯೋ ಇದೆ. ಮುಂದೇನು ಆಗುತ್ತದೆ ಎನ್ನುವುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply