LATEST NEWS
ಬಿಜೈ – ಇಂಟರ್ ನೆಟ್ ಕೇಬಲ್ ಗಳಿಂದಾಗಿ ತಪ್ಪಿ ಮುಂಬೈ ಮಾದರಿ ದುರಂತ – ರಸ್ತೆ ಕಡೆ ವಾಲಿದ ಬೃಹತ್ ಪ್ಲೆಕ್ಸ್
ಮಂಗಳೂರು ಜುಲೈ 26:ಮುಂಬೈ ಹೋರ್ಡಿಂಗ್ ದುರಂತದ ರೀತಿಯ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಖಾಸಗಿ ಕಂಪೆನಿಗಳ ಇಂಟರ್ ನೆಟ್ ಕೇಬಲ್ ಗಳಿಂದಾಗಿ ರಸ್ತೆ ಮೇಲೆ ಬೀಳಬೇಕಾಗಿದ್ದ ಬೃಹತ್ ಪ್ಲೆಕ್ಸ್ ಅರ್ಧದಲ್ಲೇ ನಿಂತ ಘಟನೆ ಬಿಜೈನ ಬಟ್ಟಗುಡ್ಡೆಯಲ್ಲಿ ನಡೆದಿದೆ.
ನಗರದಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಬಿಜೈ ಬಟ್ಟಗುಡ್ಡೆಯ ಸಮೀಪ ರಸ್ತೆಯ ಬದಿಯಲ್ಲಿ ಆಳವಡಿಸಿರುವ ಬೃಹತ್ ಪ್ಲೆಕ್ಸ್ ಒಂದು ಮೆಸ್ಕಾಂನ ಹೈ ಟೆನೆನ್ಶನ್ ವಯರ್ ಮೇಲೆ ಬಿದ್ದಿದೆ. ಈ ವೇಳೆ ಖಾಸಗಿ ಸಂಸ್ಥೆಗಳ ಇಂಟರ್ ನೆಟ್ ಕೇಬಲ್ ಗಳು ಇರುವುದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಅತೀ ಹೆಚ್ಚು ವಾಹನಗಳು ಸಂಚರಿಸುವ ರಸ್ತೆ ಇದಾಗಿದ್ದು, ರಸ್ತೆ ಮೇಲೆ ಪ್ಲೆಕ್ಸ್ ಹೋರ್ಡಿಂಗ್ ಬಿದ್ದಿದ್ದರೆ ದೊಡ್ಡ ಅನಾಹುತವಾಗುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
ಅಷ್ಟು ದೊಡ್ಡ ಜಾಹಿರಾತು ಫಲಕವನ್ನು ಹಾಕುವ ವೇಳೆ ಗಾಳಿ ಹೋಗಲು ದಾರಿ ಯಾವುದೇ ರಂಧ್ರವನ್ನು ಮಾಡಿಲ್ಲ ಅಲ್ಲದೆ, ಹಳೆಯ ಪ್ಲೆಕ್ಸ್ ಮೇಲೆಯೇ ಮತ್ತೊಂದು ಪ್ಲೆಕ್ಸ, ಹಾಕಿದ್ದು, ಈ ಜಾಹಿರಾತು ಫಲಕ ಬೀಳಲು ಕಾರಣ ಎಂದು ಹೇಳಲಾಗಿದೆ. ಮಂಗಳೂರಿನಲ್ಲಿ ಮಳೆ ಅಬ್ಬರಕ್ಕೆ ಅನಾಹುತಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣುಚ್ಚಿ ಕುಳಿತಿದೆ. ನಗರದಲ್ಲಿ ಎಡೆಬಿಡದೆ ಗಾಳಿ ಮಳೆಯಾಗುತ್ತಿದ್ದು, ಅಪಾಯಕಾರಿ ರೀತಿಯಲ್ಲಿರುವ ಪ್ಲೆಕ್ಸ್ ಗಳ ಬಗ್ಗೆ ಯಾವುದೇ ಕ್ರಮತೆಗದುಕೊಂಡಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲಿಸ್ ಇಲಾಖೆ, ಮೆಸ್ಕಾಂ ನವರು ಆಗಮಿಸಿದ್ದಾರೆ.
ಸದ್ಯ ಪ್ಲೆಕ್ಸ್ ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈಯಲ್ಲಿ ನಡೆದ ಹೋರ್ಡಿಂಗ್ಸ್ ಪ್ರಕರಣದ ಬಳಿಕವೂ ಪಾಲಿಕೆಯಾಗಲೀ ಜಿಲ್ಲಾಡಳಿತವಾಗಲೀ ಕ್ರಮಕೈಗೊಳ್ಳದೆ ಕಣ್ಣುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದೆ.