LATEST NEWS
ಬ್ರಾಹ್ಮಣರ ಜನಿವಾರವನ್ನ ಕತ್ತರಿಸುವ ಮೂಲಕ ಬ್ರಾಹ್ಮಣರ ಶಾಪಕ್ಕೆ ರಾಜ್ಯಸರಕಾರ ಗುರಿಯಾಗಿದೆ – ಶಾಸಕ ಡಾ.ಭರತ್ ಶೆಟ್ಟಿ

ಮಂಗಳೂರು ಎಪ್ರಿಲ್ 18: ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪೊಲೀಸರಿಗೆ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಂದೆ ಈ ಧೈರ್ಯ ಏಕೆ ಇರಲಿಲ್ಲ ,ಈ ಸರಕಾರಕ್ಕೆ ಬ್ರಾಹ್ಮಣ ಶಾಪ ತಟ್ಟಿದ್ದು ಇದರ ಪರಿಣಾಮ ಶೀಘ್ರ ತಿಳಿಯಲಿದೆ. ಪೊಲೀಸರ ಅತಿರೇಕದ ವರ್ತನೆಯೂ ಹೆಚ್ಚುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಗಮನಿಸಲು, ಅವರನ್ನು ಅವಮಾನಿಸಲು ಎಲ್ಲಾ ಕಡೆ ಪ್ರಯತ್ನಿಸುತ್ತಲೇ ಇದೆ. ಹಿಂದೂಪರ ಹೋರಾಟಗಾರರಿಗೆ, ಶಾಸಕರುಗಳಿಗೆ ಕೇಸಿನ ಮೇಲೆ ಕೇಸು ಹಾಕುವ ಈ ಸರ್ಕಾರ ಇದೀಗ ಬ್ರಾಹ್ಮಣರ ಜನಿವಾರವನ್ನ ಕತ್ತರಿಸುವ ಮೂಲಕ ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದೆ.

ಈ ಘಟನೆಯ ವಿರುದ್ಧ ಬ್ರಾಹ್ಮಣ ಸಂಘಟನೆ ಮಾತ್ರ ಅಲ್ಲ, ರಾಜ್ಯದ ಇಡೀ ಹಿಂದೂ ಸಮುದಾಯ ಎದ್ದು ನಿಂತು ಒಕ್ಕರಳಿನಿಂದ ಪ್ರತಿಭಟಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಿಇಟಿ ಪರೀಕ್ಷಾ ಕೇಂದ್ರ ಒಂದರಲ್ಲಿ ಭದ್ರತೆಗೆ ಬಂದಿದ್ದ ಪೊಲೀಸರು ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರವನ್ನೇ ಕತ್ತರಿಸಿ ಹಿಂದುಗಳ ವಿರುದ್ಧ ದೌರ್ಜನ್ಯವನ್ನು ಮಾಡಿದ್ದಾರೆ. ಈ ಅಧಿಕಾರಿಗಳನ್ನು ಪತ್ತೆಹಚ್ಚಿ ಅಮಾನತು ಮಾಡುವ ಕಾರ್ಯವನ್ನು ಪೋಲಿಸಿ ಇಲಾಖೆ ಮಾಡಬೇಕು ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಹಿಂದೂ ಪರ ಯಾವುದೇ ಕೆಲಸ ಮಾಡದ ಈ ಸರಕಾರ ವಕ್ಫ್ ಕಾಯಿದೆ ಜಾರಿ ಮಾಡುದಿಲ್ಲ,ಒಂದೇ ಮತದವರ ಕ್ರಿಮಿನಲ್ ಕೇಸ್ ತೆಗೆದು ಹಾಕುತ್ತದೆ.ಅವರಿಗೆ 4% ಮೀಸಲಾತಿ ನೀಡುತ್ತದೆ.ಓಟ್ ಬ್ಯಾಂಕ್ ರಾಜಕೀಯಕ್ಕೆ ಶರಣಾಗಿ ಬಹುಸಂಖ್ಯಾತ ರಿಗೆ ಅನ್ಯಾಯ ಮಾಡುತ್ತಿದೆ.ಇದಕ್ಕೆ ಬೇಗನೆ ಇತಶ್ರೀ ಸಿಗಲಿದೆ ಎಂದಿದ್ದಾರೆ.
2 Comments