DAKSHINA KANNADA
ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕೆಯ್ಯೂರಿನ ಯುವತಿ ಶ್ರುತಿ ರೈ

ಪುತ್ತೂರು ಮೇ 03: ಬೆಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರಿನ ಯುವತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಆಶಾ ಕಾರ್ಯಕರ್ತೆಯಾಗಿರುವ ಸೋಮಾವತಿ ರೈ ದಂಪತಿಯ ಏಕೈಕ ಪುತ್ರಿ ಶ್ರುತಿ ಸಿ.ರೈ(22ವ.)ಮೃತಪಟ್ಟವರು.
ಕಳೆದೆರಡು ವರ್ಷಗಳಿಂದ ಬೆಂಗಳೂರುನಲ್ಲಿ ಆನಿಮೇಷನ್ ಶಿಕ್ಷಣ ಪಡೆಯುತ್ತಿದ್ದ ಅವರು ಅಲ್ಲೇ ವಾಸ್ತವ್ಯವಿದ್ದರು. ಕೋರ್ಸ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಬಾಡಿಗೆ ರೂಮಲ್ಲಿದ್ದ ಅವರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ವಿಷಯ ತಿಳಿದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಏ.30ರಂದು ಮೃತಪಟ್ಟಿದ್ದು ಮೇ 1ರಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇದ್ದ ಏಕೈಕ ಪುತ್ರಿಯನ್ನು ಕಳೆದುಕೊಂಡಿರುವ ಚಂದ್ರಶೇಖರ್ ರೈ ಕುಟುಂಬ ದು:ಖಸಾಗರದಲ್ಲಿ ಮುಳುಗಿದೆ.