Connect with us

    FILM

    ಬೆಂಗಳೂರು ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಹಾಗೂ ಆಶಿ ರಾಯ್ ಡ್ರಗ್ಸ್​ ಸೇವನೆ ದೃಢ..!!

    ಬೆಂಗಳೂರು ಮೇ 23: ಬೆಂಗಳೂರಿನಲ್ಲಿ ನೆಡದ ರೇವ್ ಪಾರ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಿನೆಮಾ ನಟಿಯರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ತೆಲುಗಿನ ನಟಿ ಹೇಮಾ ಹಾಗೂ ಆಶಿ ರಾಯ್ ಅವರು ಡ್ರಗ್ಸ್ ಸೇವನೆ ಮಾಡಿರುವುದು ಬ್ಲಡ್ ಟೆಸ್ಟ್ ನಿಂದ ತಿಳಿದು ಬಂದಿದೆ.


    ವಾಸು ಎಂಬಾತನ ಬರ್ತಡೇ ಅಂಗವಾಗಿ Sunset To Sun Rise Victory ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನೂರರಿಂದ ನೂರೈವತ್ತು ಮಂದಿ ಜಮಾವಣೆಗೊಂಡಿದ್ದರು. ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಿರುವ ಸುಳಿವು ಸಿಕ್ಕಿದೆ. ಎಂಡಿಎಂಎ, ಕೊಕೇನ್, ಹೈಡೋಗಾಂಜಾ ಪತ್ತೆಯಾಗಿದೆ. ಸದ್ಯ ಬ್ಲಡ್ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದವರಿಗೆ ಸಿಸಿಬಿ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

    ಮುಖ್ಯವಾಗಿ ತೆಲುಗು ನಟಿ ಹೇಮಾ ಹಾಗೂ ಆಶು ರೈ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಈ ಮೂಲಕ ತೆಲುಗು ನಟಿ ಹೇಮಾ ಹಾಗೂ ಆಶು ಸಹ ಡ್ರಗ್ಸ್​ ಸೇವಿಸಿರುವುದ ದೃಢಪಟ್ಟಿದೆ. 103 ಜನರ ಪೈಕಿ 86 ಜನರು ಡ್ರಗ್ಸ್​ ಸೇವಿಸಿರುವುದು ದೃಢಪಟ್ಟಿದೆ. ಸಿಸಿಬಿ ತಂಡ 98 ಜನರ ಬ್ಲಡ್ ಸ್ಯಾಂಪಲ್ ಪಡೆದಿತ್ತು. ಅದರಲ್ಲಿ 84 ಜನರ ರಿಪೋರ್ಟ್​​ ಪಾಸಿಟಿವ್ ಬಂದಿದೆ. 73 ಪುರುಷರ ಪೈಕಿ 59 ಮತ್ತು 30 ಯುವತಿಯರ ಪೈಕಿ 27 ಜನರ ವರದಿ ಪಾಸಿಟಿವ್ ಬಂದಿದೆ. ಐಟಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದ್ದ ರೇವ್ ಪಾರ್ಟಿ ಕೇಸ್​ ತನಿಖೆಯನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಡಿಜಿ ಅಂಡ್ ಐಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸದ್ಯ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇನ್ಸ್‌ಪೆಕ್ಟರ್ ಲಕ್ಷ್ಮೀ ಪ್ರಸಾದ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *