Connect with us

    KARNATAKA

    ಬೆಂಗಳೂರು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ, ಹಿಂದಿನ ಕಾರು ಚಾಲಕ ಪೊಲೀಸ್ ವಶಕ್ಕೆ..!

    ಬೆಂಗಳೂರು  : ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರತಿಮಾ ಬಳಿ ಡ್ರೈವರ್ ಆಗಿದ್ದ ಕಿರಣ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ಕೊಲೆ ಮಾಡಿರುವುದನ್ನು ಕಿರಣ್ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.

    ಪ್ರತಿಮಾರ ಸರ್ಕಾರಿ ಕಾರಿನ ಚಾಲಕನಾಗಿದ್ದ ಕಿರಣ್ ಎಂಬಾತನೇ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತರಾದ ದಯಾನಂದ್ ಅವರು, “ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ . ಆತನನ್ನು ಮಲೆಮಹದೇಶ್ವರ ದೇವಸ್ಥಾನದಲ್ಲಿ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಕಿರಣ್, ಕೆಲವು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ.

    ಇತ್ತೀಚೆಗೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದೇ ಕಾರಣಕ್ಕೆ ಕಿರಣ್ ನನ್ನು ಇತ್ತೀಚೆಗೆ ಪ್ರತಿಮಾ ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿದೆ. ಅದೇ ಸೇಡಿಗೆ ಕಿರಣ್, ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ” ಎಂದು ಆಯುಕ್ತರು ತಿಳಿಸಿದ್ದಾರೆ. ಇಲಾಖೆಯಿಂದ ಪ್ರತಿಮಾ ಅವರ ಉಪಯೋಗಕ್ಕಾಗಿ ಬೊಲೆರೊ ವಾಹನವನ್ನು ನೀಡಲಾಗಿತ್ತು. ಆ ಹೊಸ ಕಾರನ್ನು ಚಾಲಕ ಕಿರಣ್ ಅಪಘಾತಕ್ಕೀಡು ಮಾಡಿದ್ದ. ಅದರಿಂದ, ಸಿಟ್ಟಿಗೆದ್ದಿದ್ದ ಪ್ರತಿಮಾ ಅವರು ಕಿರಣ್ ನನ್ನು ವಾರದ ಹಿಂದೆ ಕೆಲಸದಿಂದ ವಜಾಗೊಳಿಸಿದ್ದರೆಂದು ಹೇಳಲಾಗಿದೆ.  ಪ್ರತಿಮಾ ಅವರು ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿಸಿ ಕೊಲೆ ಮಾಡಿರುವುದು ಸ್ಪಷ್ಟವಾಗಿತ್ತು. ಅದರಿಂದ ಯಾರೋ ಪ್ರತಿಮಾ ಅವರಿಗೆ ಪರಿಚಯದವರೇ ಕೊಲೆ ಮಾಡಿರಬಹುದೆಂದು ಗುಮಾನಿಯಿತ್ತು. ಅದೇ ವೇಳೆ, ಪ್ರತಿಮಾ ಅವರ ಮನೆಗೆ ಬಂದು ಹೋಗುತ್ತಿದ್ದವರ ವಿವರಗಳನ್ನು ಕಲೆ ಹಾಕಿದ್ದಾಗ, ಕಿರಣ್ ವಾರದ ಹಿಂದೆ ಕೆಲಸ ಬಿಟ್ಟಿದ್ದ ಅಂಶ ಪತ್ತೆಯಾಗಿತ್ತು. ಆದರೆ, ಕಿರಣ್ ನನ್ನು ಹುಡುಕಾಡಿದಾಗ ಆತ ನಾಪತ್ತೆಯಾಗಿದ್ದ. ಕಡೆಗೆ ಆತನ ಮೊಬೈಲ್ ಅನ್ನು ಟ್ರೇಸ್ ಮಾಡುವ ಮೂಲಕ ಆತನ ಲೊಕೇಶನ್ ಪತ್ತೆ ಮಾಡಿದ ಸುಬ್ರಹ್ಮಣ್ಯ ನಗರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಕೆಲಸದಿಂದ ತೆಗೆದ ಕೂಡಲೇ ಪ್ರತಿಮಾರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಕಿರಣ್, ಪೊಲೀಸರ ವಿಚಾರಣೆ ವೇಳೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ, ಪ್ರತಿಮಾ ಅವರು ತಮಗೆ ನೀಡಿದ್ದ ಸರ್ಕಾರಿ ಕಾರಿನಲ್ಲೇ ಬಂದು ಮನೆಗೆ ತಲುಪಿದ್ದರು. ಅಂದು ರಾತ್ರಿ ಸುಮಾರು 8.30ರ ಸುಮಾರಿಗೆ ಅವರ ಸಹೋದರ ಫೋನ್ ಮಾಡಿದ್ದರು. ಅವರು ಕರೆ ಸ್ವೀಕರಿಸಿರಲಿಲ್ಲ. ಪುನಃ ಭಾನುವಾರ ಬೆಳಗ್ಗೆ ಕರೆ ಮಾಡಿದಾಗ ಆಗಲೂ ಕರೆ ಸ್ವೀಕರಿಸಿದೇ ಇದ್ದಿದ್ದರಿಂದ ಅವರು ಪ್ರತಿಮಾ ಅವರು ಬಾಡಿಗೆಯಿದ್ದ ಕೆಳಗಿನ ಮನೆಯವರಿಗೆ ಫೋನಾಯಿಸಿ, ಮೇಲೆ ಹೋಗಿ ಪ್ರತಿಮಾರನ್ನು ಮಾತನಾಡಿಸುವಂತೆ ಕೇಳಿಕೊಂಡಿದ್ದರು. ಹಾಗೆಯೇ, ಪ್ರತಿಮಾ ಅವರ ಕೆಳಗಿನ ಮನೆಯವರು ಪ್ರತಿಮಾ ಅವರ ಮನೆಯಲ್ಲಿ ಹೋಗಿ ನೋಡಿದಾಗ ಅವರ ಬೆಡ್ ರೂಮಿನಲ್ಲಿ ಪ್ರತಿಮಾ ಅವರ ಶವ ಬಿದ್ದಿದ್ದು ಕಂಡು ಬಂದು ಗಾಬರಿಯಾಗಿ, ಪ್ರತಿಮಾ ಸಹೋದರಿಗೆ ಸುದ್ದಿ ಮುಟ್ಟಿಸಿದ್ದರು. ಆಗ ಬೇಗನೇ ಧಾವಿಸಿ ಬಂದ ಪ್ರತಿಮಾ ಅವರ ಸಹೋದರು ಪೊಲೀಸರಿಗೆ ಸುದ್ದಿ ತಿಳಿಸಿದ್ದರು. ಆಗ, ಪ್ರಕರಣ ಹೊರಬಿದ್ದಿತ್ತು.\

    Share Information
    Advertisement
    Click to comment

    You must be logged in to post a comment Login

    Leave a Reply