KARNATAKA
ಬೆಂಗಳೂರಿನ ಡೇ ಕೇರ್‌ನಲ್ಲಿ ಪುಟ್ಟ ಮಗುವಿನ ಮೇಲೆ ಇನ್ನೊಂದು ಮಗುವಿನಿಂದ ಹಲ್ಲೆ – ವಿಡಿಯೋ ವೈರಲ್

ಬೆಂಗಳೂರು ಜೂನ್ 24: ಬೆಂಗಳೂರಿನ ಡೇ ಕೆರ್ ನಲ್ಲಿ ಪುಟ್ಟ ಮಗುವಿನ ಮೇಲೆ ಮತ್ತೊಂದು ಮಗು ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಚಿಕ್ಕಲಸಂದ್ರದ ಮಾಂಟೆಸ್ಸರಿ ಶಾಲೆಯಲ್ಲಿ ಜೂನ್ 21ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ವೈರಲ್ ಆಗುತ್ತಿದ್ದಂತೆಯೇ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆದಾಗ ಪ್ಲೇಹೌಸ್‌ನಲ್ಲಿ ಇತರ ಮಕ್ಕಳು ಕೂಡಾ ಇರುವುದು ವಿಡಿಯೋ ದೃಶ್ಯದಲ್ಲಿ ಕಾಣಬಹುದು. ಕೋಣೆಯಲ್ಲಿ ಇದ್ದು ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದ ಅಟೆಂಡರ್ ಮಕ್ಕಳನ್ನು ಮಾತ್ರ ಕೋಣೆಯಲ್ಲಿ ಬಿಟ್ಟು ಬಾಗಿಲು ಎಳೆದುಕೊಂಡು ಹೊರಗೆ ಹೋಗಿದ್ದಾರೆ. ಈ ವೇಳೆ ಬಾಲಕನು ಬಾಲಕಿಗೆ ಹೊಡೆದು ನೆಲಕ್ಕೆ ಬೀಳಿಸಿದ್ದಾನೆ. ಬೆಂಗಳೂರಿನ ಮಾಂಟೆಸ್ಸರಿ ಶಾಲೆಯೊಂದರಲ್ಲಿ ಪುಟ್ಟ ಬಾಲಕನೊಬ್ಬ ತನಗಿಂತ ಚಿಕ್ಕ ವಯಸ್ಸಿನ ಹೆಣ್ಣು ಮಗುವಿಗೆ ಹೊಡೆದಿರುವ ಘಟನೆ ನಡೆದಿದೆ. ನಗರದ ಚಿಕ್ಕಲಸಂದ್ರದ ಮಾಂಟೆಸ್ಸರಿ ಶಾಲೆಯಲ್ಲಿ ಜೂನ್ 21ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ವೈರಲ್ ಆಗುತ್ತಿದ್ದಂತೆಯೇ ಘಟನೆ ಬೆಳಕಿಗೆ ಬಂದಿದೆ.

ಡೇಕೇರ್ ಕೇಂದ್ರದಲ್ಲಿ ಮಕ್ಕಳಿರುವ ಕೊಠಡಿಯಿಂದ ಮಕ್ಕಳನ್ನು ನೋಡಿಕೊಳ್ಳುವ ಅಟೆಂಡರ್ ಕೋಣೆಯ ಬಾಗಿಲು ಹಾಕಿ ಹೊರ ಹೋದ ವೇಳೆ ಈ ಘಟನೆ ನಡೆದಿದೆ. 2 ವರ್ಷದ ಹೆಣ್ಣು ಮಗುವಿಗೆ ಮೂರು ವರ್ಷದ ಬಾಲಕ ಹೊಡೆದಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮೊದಲು ಪುಟ್ಟ ಬಾಲಕಿಯನ್ನು ನೆಲಕ್ಕೆ ತಳ್ಳಿದ ಬಾಲಕ ಮಗುವಿನ ಮೇಲೆ ಮೂರು ನಾಲ್ಕು ಬಾರಿ ಹೊಡೆಯುತ್ತಾನೆ. ಮತ್ತೊಮ್ಮೆ ಕೆನ್ನೆಯ ಮೇಲೆ ಬಾರಿಸುತ್ತಾನೆ. ಆ ಬಳಿಕ ತುಸು ದೂರದಿಂದ ಓಡಿ ಬಂದು ಮತ್ತೊಮ್ಮೆ ಮಗುವನ್ನು ಬೀಳಿಸಿ ಮತ್ತೆ ಹೊಡೆದಿದ್ದಾನೆ. ಇಷ್ಟೆಲ್ಲಾ ಆದರೂ ಮಕ್ಕಳನ್ನು ನೋಡಿಕೊಳ್ಳಬೇಕಾದ ಸಿಬ್ಬಂದಿ ಆ ಕೋಣೆಯತ್ತ ಸುಳಿದಿಲ್ಲ. 2 ನಿಮಿಷ ಹಾಗೂ 20 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಇದರಲ್ಲಿ 27ನೇ ಸೆಕೆಂಡ್‌ನಿಂದ 1 ನಿಮಿಷ 35 ಸೆಕೆಂಡ್‌ನವರೆಗೂ ಹೊಡೆದಿದ್ದು ಕಾಣಿಸುತ್ತಿದೆ. ಅಂದರೆ ಒಂದು ನಿಮಿಷಕ್ಕೂ ಹೆಚ್ಚು ಕಾಲ ಪುಟ್ಟ ಮಗುವಿಗೆ ಬಾಲಕ ಹೊಡೆದಿದ್ದಾನೆ.
ಟ್ವಿಟರ್‌ನಲ್ಲಿ ಈ ಸಂಬಂಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ಪೊಲೀಸರಿಗೂ ಮಾಹಿತಿ ತಲುಪಿದೆ. ಬೆಂಗಳೂರು ನಗರ ಪೊಲೀಸರು, ಪ್ರಕರಣವನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಆದೇಶ ನೀಡಿದ್ದಾರೆ. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪೋಷಕರೇ ಗಮನಿಸಿ: ಚಿಕ್ಕಲಸಂದ್ರದಲ್ಲಿರೋ ಡೇ ಕೇರ್ವೊಂದರಲ್ಲಿ ಮಕ್ಕಳನ್ನು ಆರೈಕೆ ಮಾಡಲು ಯಾರು ಇರಲಿಲ್ಲ. ಇದರಿಂದ ಇಬ್ಬರು ಮಕ್ಕಳು ಕಿತ್ತಾಡಿಕೊಂಡ ಘಟನೆ ನಡೆದಿದೆ. #newsfirstkannada #KannadaNews #Chikkalasandra#Bengaluru #childabuse #kids #ViralVideo pic.twitter.com/exqPiLQ0IR
— NewsFirst Kannada (@NewsFirstKan) June 22, 2023