LATEST NEWS
VIDEO : ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸ…ಹಪ್ತಾ ವಸೂಲಿಗೆ ಮೀನಿನ ಅಂಗಡಿ ಸಿಬ್ಬಂದಿ ಮೇಲೆ ತಲ್ವಾರ್ ದಾಳಿ

ಬೆಂಗಳೂರು ಡಿಸೆಂಬರ್ 18: ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಇದೀಗ ಹಪ್ತಾ ನೀಡಿಲ್ಲ ಎಂದು ರೌಡಿಯೊಬ್ಬ ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಜೈ ಭಾರತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ರೌಡಿ ಸುಜೀತ್ ಎಂಬಾತ ನಿನ್ನೆ ರಾತ್ರಿ ಬಾಣಸವಾಡಿಯ ಜೈ ಭಾರತ್ ನಗರದಲ್ಲಿರುವ ಮೀನಿನ ಅಂಗಡಿ ಬಳಿಬಂದು ಹಫ್ತಾ ಕೇಳಿದ್ದಾನೆ. ಈ ವೇಳೆ ಮೀನಿನ ಅಂಗಡಿ ಸಿಬ್ಬಂದಿ ಹಪ್ತಾ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುಜೀತ್ ಲಾಂಗ್ ಬೀಸಿ ಪುಂಡಾಟ ಮೆರೆದಿದ್ದಾನೆ. ಘಟನೆಯ ಬಳಿಕ ಬಾಣಸವಾಡಿ ಪೊಲೀಸರು ಆರೋಪಿ ಫ್ರೇಜರ್ ಟೌನ್ ನಿವಾಸಿ ಸುಜೀತ್‍ನನ್ನು ಬಂಧಿಸಿದ್ದಾರೆ.

VIDEO