Connect with us

KARNATAKA

ಬೆಂಗಳೂರು ಏರ್ ಪೋರ್ಟ್ ನೋಡಿ ಶಾಕ್ ಆದ ಜಪಾನಿನ ಟ್ರಾವೆಲ್‌ ವ್ಲಾಗರ್‌

ಬೆಂಗಳೂರು ನವೆಂಬರ್ 14: ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್ 2 ನೋಡಿ ಜಪಾನ್ ವ್ಲಾಗರ್ ಒಬ್ಬರು ಶಾಕ್ ಆಗಿರುವ ವಿಡಿಯೋ ವೈರಲ್ ಆಗಿದೆ. ಗ್ರೀನ್‌ ಏರ್‌ಪೋರ್ಟ್‌ ಪರಿಕಲ್ಪನೆಯಲ್ಲಿ ನಿರ್ಮಾಣವಾದ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣವಾಗಿದೆ.


ಜಪಾನಿನ ಟ್ರಾವೆಲ್‌ ವ್ಲಾಗರ್‌ ಕಿಕಿ ಚೆನ್‌ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ರಲ್ಲಿ ಬಂದಿಳಿದಾಗ ಇಲ್ಲಿನ ಅದ್ಭುತ ಸೌಂದರ್ಯವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಆಶೇಂದ್ರ ಪಾಟೇಲ್‌ (IamAshendra) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜಪಾನ್‌ ಟ್ರಾವೆಲ್‌ ವ್ಲೋಗರ್‌ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2 ರ ಸೊಬಗನ್ನು ಕಂಡು ಮನಸೋತಂತಹ ದೃಶ್ಯವನ್ನು ಕಾಣಬಹುದು. ಆಕೆ ಏರ್‌ಪೋರ್ಟ್‌ನಲ್ಲಿರುವ ಈವೆಂಟ್‌ ಸ್ಪೇಸ್‌, ನಿಕೋಬಾರ್‌ ಲೌಂಜ್‌, ಎಂಟರ್ಟೈನ್ಮೆಂಟ್‌ ಏರಿಯಾಗಳನ್ನೆಲ್ಲಾ ತಿರುಗಾಡುತ್ತಾ ನಾನು ಭಾರತದಲ್ಲಿನ ವಿಮಾನ ನಿಲ್ದಾಣದಲ್ಲಿ ಇದ್ದೇನೆಂದು ನನಗೆ ನಂಬಲಾಗುತ್ತಿಲ್ಲ ಎನ್ನುತ್ತಾ ಏರ್‌ಪೋರ್ಟ್‌ ಸೌಂದರ್ಯವನ್ನು ಕಂಡು ಮನಸೋತಿದ್ದಾರೆ.

ಹಚ್ಚ ಹಸಿರಿನಿಂದ ಕೂಡಿದ ಈ ಪರಿಸರ ಸ್ನೇಹಿ ಏರ್‌ಪೋರ್ಟ್‌ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ ಮೊದಲ ಬಾರಿಗೆ ಈ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟಂತಹ ಜಪಾನ್‌ ಮಹಿಳೆಯೊಬ್ಬರೂ ಕೂಡಾ ಇಲ್ಲಿನ ಸೌಂದರ್ಕ್ಕೆ ಮಾರು ಹೋಗಿದ್ದು, ಅರೇ ಭಾರತದ ವಿಮಾನ ನಿಲ್ದಾಣದಲ್ಲಿ ಇದ್ದೇನೆಂದು ನಂಬಲಾಗುತ್ತಿಲ್ಲ ಎನ್ನುತ್ತಾ ಫುಲ್‌ ಶಾಕ್‌ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *