Connect with us

BELTHANGADI

ಪಾಕ್ ಪರ ಘೋಷಣೆ ನೈಜ ಆರೋಪಿಗಳಾದ ಸಂಘಪರಿವಾರದವರನ್ನು ಬಂಧಿಸದಿದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ಮಾರ್ಚ್ : ಎಸ್‌ಡಿಪಿಐ

ಮಂಗಳೂರು, ಜನವರಿ 08 : ಡಿಸೆಂಬರ್‌ 30 ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ದಿನ ಬೆಳ್ತಂಗಡಿ ತಾಲೂಕಿನ ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗೆ ಎಸ್‌ಡಿಪಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಗೊಳಿಸಿದಾಗ ಸಹಜವಾಗಿ ಕಾರ್ಯಕರ್ತರು ಎಸ್‌ಡಿಪಿಐ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಆ ಸಮಯದಲ್ಲಿ ಪೂರ್ವಯೋಜಿತ ಕೃತ್ಯವೆಂಬಂತೆ ಕನ್ನಡ ಟಿವಿ ಮಾಧ್ಯಮವೊಂದು ಎಸ್‌ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿಯೊಂದನ್ನು ಪ್ರಕಟಿಸಿದೆ.

ಆ ಕೂಡಲೇ ನಮ್ಮ ಪಕ್ಷದ ಸ್ಥಳೀಯ ನಾಯಕರು ಬೆಳ್ತಂಗಡಿ ಠಾಣೆಯಲ್ಲಿ ಕನ್ನಡ ಟಿವಿ ಮಾಧ್ಯಮದ ವಿರುದ್ಧ ದೂರು ಕೊಟ್ಟರೂ ದೂರು ದಾಖಲಿಸಲು ನಿರಾಕರಿಸಿದ ಪೋಲಿಸರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ರಾತ್ರೋ ರಾತ್ರಿ ಅಮಾಯಕರಾದ 12 ಮಂದಿ ಕಾರ್ಯಕರ್ತರ ಮನೆಗೆ ನುಗ್ಗಿ ಅವರನ್ನು ಅಮಾನುಷವಾಗಿ ಬಂಧಿಸಿ ಠಾಣೆಯಲ್ಲಿ ಕೂರಿಸಿದ್ದರು.

ಈ ಬಗ್ಗೆ ನಮ್ಮ ನಾಯಕರು ಹಾಗೂ ಬಂಧನಕ್ಕೊಳಗಾದ ಯುವಕರ ಮನೆಯವರು ಠಾಣಾಧಿಕಾರಿಗಳು ಹಾಗೂ ಉನ್ನತ ಪೋಲಿಸ್ ಅಧಿಕಾರಿಗಳನ್ನು ವಿಚಾರಿಸಿದಾಗ ನಮಗೆ ಮೇಲಿನಿಂದ ಒತ್ತಡಗಳಿವೆ ನಾವು ಅಸಹಾಯಕರಾಗಿದ್ದೇವೆ ಎಂದರು ಹಾಗೂ ಅದೇ ದಿನ 3 ಮಂದಿಯ ಮೇಲೆ ದೇಶದ್ರೋಹದ ಕೇಸು ದಾಖಲಿಸುವ ಮೂಲಕ ಪೋಲಿಸರು ಅಮಾಯಕರ ಯುವಕರನ್ನು ಜೈಲಿಗಟ್ಟಿದರು. ಅನಂತರ ನಾವು ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ‌ಹಾಗೂ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಪೋಲಿಸರ ಪಕ್ಷಪಾತ ಧೋರಣೆಯನ್ನು ಬಲವಾಗಿ ಖಂಡಿಸಿದೆವು. ಇದರ ಹಿನ್ನಲೆಯಲ್ಲಿ ಬಿಜೆಪಿ ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಇದನ್ನು ಪೋಲಿಸರು ಪ್ರಾಮಾಣಿಕವಾಗಿ ತನಿಖೆಯ ಮೂಲಕ ಬಯಲಿಗೆಲೆಯಬೇಕೆಂದು ಒತ್ತಾಯಿಸಿದೆವು.

ಇದಾದ 2 ದಿನಗಳ ನಂತರ ಪಾಕ್ ಪರ ಘೋಷಣೆಯನ್ನು ಕೂಗಿದ್ದು ಬಿಜೆಪಿ ಸಂಘಪರಿವಾರ ಕಾರ್ಯಕರ್ತರ ಗುಂಪು ಎಂದು ವೀಡಿಯೋದ ಮೂಲಕ ಸ್ಫಷ್ಟವಾಗಿ ಬಹಿರಂಗೊಂಡು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದ ಮೂಲಕ ಪ್ರಸಾರವಾಗಿದ್ದು ಇದು ಇಡೀ ಜಿಲ್ಲೆಗೆ ತಿಳಿದಂತಹ ಸತ್ಯ ಘಟಣೆಯಾಗಿದೆ. ಈ ಬಗ್ಗೆ ಪೋಲಿಸ್ ಇಲಾಖೆ ಆ ನೈಜ ಆರೋಪಿಗಳ ಮೆಲೆ ಕಾನೂನು ಕ್ರಮ ಕೈಗೊಳ್ಳಲು ನಾವು ದೂರು ನೀಡಿದರೂ ಪೋಲಿಸರು ಆರೋಪಿಗಳು ಬಿಜೆಪಿ ಕಾರ್ಯಕರ್ತರಾದ ಕಾರಣ ಇದರ ಬಗ್ಗೆ ಗಂಬೀರವಾಗಿ ಪರಿಗಣಿಸದೇ ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸಿ ದ್ವಿಮುಖ ದೋರಣೆಯನ್ನು ತೋರಿದ್ದಾರೆ.

ಈ ಸಂದರ್ಭದಲ್ಲಿ ಅಮಾಯಕ ಯುವಕರ ಮೇಲೆ ದಾಖಲಿಸಿದ ಸುಳ್ಳು ಮೋಕದ್ದಮೆಯನ್ನು ಕೈಬಿಡಬೇಕು, ಹಾಗೂ ನೈಜ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ಈ ಕೂಡಲೇ ಬಂಧಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಎಸ್‌ಡಿಪಿಐ ಪಕ್ಷ ಹಾಗೂ ನಾಗರಿಕರು ಜನವರಿ 6 ರಂದು ಬೆಳ್ತಂಗಡಿ ಠಾಣೆಯ ಮುಂಬಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು . ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉನ್ನತ ಪೋಲಿಸ್ ಅಧಿಕಾರಿಗಳು ಆರೋಪಿಗಳನ್ನು ನಾಲ್ಕು ದಿನಗಳೊಳಗಾಗಿ ಬಂಧಿಸುತ್ತೇವೆ ದಯವಿಟ್ಟು ನೀವು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಪಕ್ಷದ ನಾಯಕರಲ್ಲಿ ವಿನಂತಿಸಿದ ಪರಿಣಾಮ ಪೋಲಿಸ್ ಅಧಿಕಾರಿಗಳ ಮಾತಿಗೆ ಗೌರವಕೊಟ್ಟು ತಾತ್ಕಾಲಿಕವಾಗಿ ಪ್ರತಿಭಟನೆ ಯನ್ನು ಕೈ ಬಿಟ್ಟಿದ್ದೇವೆ.

ಇವಾಗ ಪೋಲಿಸ್ ಅಧಿಕಾರಿಗಳು ನೈಜ ಆರೋಪಿಗಳನ್ನು ಬಂಧಿಸಲು ಹಾಗೂ ಅಮಾಯಕರ ಮೇಲಿನ ಪ್ರಕರಣ ಕೈ ಬಿಡಲು ನಾಲ್ಕು ದಿವಸದ ಕಾಲಾವಕಾಶ ಕೋರಿದ್ದು ಅದರ ಒಳಗಾಗಿ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದಿನ ದಿನ ಎಲ್ಲಾ ಸಂಘಟನೆ ಹಾಗೂ ನಾಗರಿಕರನ್ನು ಒಟ್ಟು ಸೇರಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾರ್ಚ್ ಎನ್ನುವ ಬೃಹತ್ ಹೋರಾಟವನ್ನು ನಡೆಸಲಿದ್ದೇವೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *