Connect with us

    BELTHANGADI

    ಬೆಳ್ತಂಗಡಿ : ಮನೆ ಮಾಲಕಿ ಮೇಲೆ ಸಾಕುನಾಯಿ ದಾಳಿ, ಮಹಿಳೆ ಗಂಭೀರ..!

    ಬೆಳ್ತಂಗಡಿ :  ಮನೆಯ ಸಾಕು ನಾಯಿ ಮನೆ ಮಾಲಕಿ ಮೇಲೇಯೇ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಇಂದು ಗುರುವಾರ ಅಪರಾಹ್ನ ನಡೆದಿದೆ.

    Dog Attacking Woman

    ಮನೆ ಮಾಲಕಿ ನಾಯಿ ಜೊತೆ ಆಡವಾಡುತ್ತಿದ್ದಾಗ ಈ ಘಟನೆ ನಡೆದಿದೆ. ನಾಯಿ ಏಕಾಏಕಿ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೂ ಗಂಭೀರ ಗಾಯ ಮಾಡಿದೆ.   ಗಾಯಗೊಂಡ ಮಹಿಳೆಯನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ದಿ. ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತನ್ನ ಮನೆಯ ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದಾರೆ. ಪೂರ್ಣಿಮಾ ತನ್ನ ಮನೆಯಲ್ಲಿ ಸಾಕಿದ್ದ ಸಾಕು ನಾಯಿ ಜೊತೆ ಎಂದಿನಂತೆ ಆಟವಾಡುತ್ತಿದ್ದರು.  ಈ ವೇಳೆ ಮಹಿಳೆ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ, ಇದೇ ಸಂದರ್ಭ ನಾಯಿ ಪೂರ್ಣಿಮಾ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದ್ದು. ತಲೆಯ ಚಿಪ್ಪು ಎದ್ದು ಬರುವಷ್ಟು ಗಂಭೀರ ಗಾಯಗಳಾಗಿದೆ . ಕೈ ಕಾಲಿಗೂ ಕಚ್ಚಿ ಗಂಭೀರ ಗಾಯಮಾಡಿದೆ. ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ‌.

    ಇದನ್ನೂ ಓದಿ…

    ನಾಯಿ ಸೇರಿ ಸಾಕುಪ್ರಾಣಿಗಳಿಂದ ಆಗುವ ಯಾವುದೇ ಹಾನಿ, ನಡವಳಿಕೆಗೆ ಮಾಲೀಕರೇ ಜವಾಬ್ದಾರಿ: ಕರ್ನಾಟಕ ಹೈಕೋರ್ಟ್

    Share Information
    Advertisement
    Click to comment

    Leave a Reply

    Your email address will not be published. Required fields are marked *