BELTHANGADI
ಬೆಳ್ತಂಗಡಿ : ತಲೆ ಮೇಲೆ ‘ದಾರಂದ’ ಬಿದ್ದು ಬಾಲಕಿ ಮೃತ್ಯು..!
ಬೆಳ್ತಂಗಡಿ : ತಲೆ ಮೇಲೆ ದಾರಂದ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾದ ಕೊನಲೆ ಎಂಬಲ್ಲಿ ನಡೆದಿದೆ.
ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿ ಪುತ್ರಿ, ಕೇರ್ಯಾ ಸರಕಾರಿ ಶಾಲೆಯ 1 ನೇ ತರಗತಿಯ ಅಲ್ಫಿಯಾ (6) ಮೃತ ಬಾಲಕಿಯಾಗಿದ್ದಾಳೆ. ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲು ಮನೆಯ ಪಕ್ಕದಲ್ಲಿ ದಾರಂದವನ್ನು ಜೋಡಿಸಿದ್ದರು. ಈ ಸಂದರ್ಭದಲ್ಲಿ ಮಗು ಅದರ ಪಕ್ಕದಲ್ಲಿ ಆಟವಾಡುತ್ತಿರುವಾಗ ದಾರಂದವು ಆಯಾ ತಪ್ಪಿ ಮಗುವಿನ ತಲೆಗೆ ಬಿದ್ದು ಗಂಭೀರ ಗಾಯಗೊಂಡಿತು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಕೇರ್ಯ ಮಸೀದಿಯಲ್ಲಿ ದಫನ ಅಂತ್ಯ ಸಂಸ್ಕಾರ ನಡೆಯಿತು. ಜಮಾತ್ ಅಧ್ಯಕ್ಷರ ರಶೀದ್ ಕುಂಡಡ್ಕ ಮತ್ತು ಜಮಾತ್ ಶಿಕ್ಷಕರು ಉಪಸ್ಥಿತರಿದ್ದರು
You must be logged in to post a comment Login