LATEST NEWS
ಬೆಳ್ತಂಗಡಿ ಶಾಸಕರ ವೈಯುಕ್ತಿಕ ದ್ವೇಷಕ್ಕೆ ಮಹಿಳಾ ಅರಣ್ಯಾಧಿಕಾರಿ ಎತ್ತಂಗಡಿ- ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಪತ್ರ ಬರೆದ ಅಧಿಕಾರಿ ಸಂಧ್ಯಾ

ಮಂಗಳೂರು : ಅಕ್ರಮವಾಗಿ ಮರ ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ತನ್ನ ಕರ್ತವ್ಯ ನಿರ್ವಹಿಸಿದ್ದ ಮಹಿಳಾ ಅರಣ್ಯಾಧಿಕಾರಿಯೊಬ್ಬರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವರ್ಗಾವಣೆ ಮಾಡಿಸಿದ್ದು, ಇದೀಗ ವೈಯಕ್ತಿಕ ದ್ವೇಷದಿಂದ ಶಾಸಕರು ಮಾಡಿದ ವರ್ಗಾವಣೆ ಏಕಪಕ್ಷೀಯ ಆದೇಶ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಅರಣ್ಯ ಸಂಚಾರಿದಳದ ಪ್ರಭಾರ ಅಧಿಕಾರಿ ಸಂಧ್ಯಾ ಸಚಿನ್ ಈ ಆರೋಪ ಮಾಡಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಂಧ್ಯಾ ಸಚಿನ್ ಅವರನ್ನು ವರ್ಗಾವಣೆ ಮಾಡುವಂತೆ ಸಿಎಂ ಗೆ ಪತ್ರ ಬರೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಧಿಕಾರಿಯನ್ನು ಬೀದರ್ ಗೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಸದ್ಯ ಬೀದರ್ ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ಸಂಧ್ಯಾ ಸಚಿನ್ ವರ್ಗಾವಣೆ ಮಾಡಲಾಗಿದೆ.

ಇನ್ನು ಈ ವರ್ಗಾವಣೆಯಲ್ಲಿ ಶಾಸಕ ಹರೀಶ್ ಪೂಂಜಾ ಮರಗಳ್ಳರಿಗೆ ಬೆಂಬಲಿಸಿ ದ್ವೇಷದಿಂದ ವರ್ಗ ಮಾಡಿದ್ದಾರೆ ಎಂದು ಸಂದ್ಯಾ ಅವರು ಆರೋಪಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಅಕ್ರಮ ಮರ ಸಾಗಾಟಗಾರರ ಮರಮಟ್ಟು, ವಾಹನ ವಶಪಡಿಸಿಕೊಂಡ ಕಾರಣ ವರ್ಗಾವಣೆ ಮಾಡಿದ್ದು, ಮರಗಳ್ಳರಿಗೆ ಶಾಸಕರ ಬೆಂಬಲ ಇರುವುದರಿಂದ ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ ಸಾಧಿಸಿ ಬೀದರ್ ಗೆ ವರ್ಗಾವಣೆ ಮಾಡಿರೋದಾಗಿ ಆರೋಪಿಸಿದ್ದಾರೆ.
ಈ ನಡುವೆ ನ್ಯಾಯ ಒದಿಗಿಸಿಕೊಡಿ ಎಂದು ಬೆಳ್ತಂಗಡಿ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಅಧಿಕಾರಿ ಸಂಧ್ಯಾ ಅವರು ಪತ್ರ ಬರೆದಿದ್ದಾರೆ. ನ್ಯಾಯ ಒದಗಿಸಿಕೊಡುವಂತೆ ಬರೆದಿರುವ ಪತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.