Connect with us

BELTHANGADI

ಬೆಳ್ತಂಗಡಿ : ನಿರ್ಮಾಣ ಹಂತದಲ್ಲಿದ್ದ ದೇವಸ್ಥಾನದ ಗೋಡೆ ಕೆಡವಿದ ಕಿಡಿಗೇಡಿಗಳು

ಪುತ್ತೂರು ಜನವರಿ 21: ಜೀರ್ಣೋದ್ಧಾರ ಹಂತದಲ್ಲಿದ್ದ ದೇವಸ್ಥಾನದ ಗೋಡೆಗಳನ್ನು ಕಿಡಿಗೇಡಿಗಳು ಕೆಡವಿ ಹಾಕಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರದ ಕೆಲಸ ನಡೆಯುತ್ತಿದ್ದು, ನಿರ್ಮಾಣ ಹಂತದ ಗೋಡೆಯನ್ನು ಯಾರೋ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಈ ಹಿನ್ನಲೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳೀಯ ವ್ಯಕ್ತಿ ಫಿಲಿಪ್ ಎಂಬವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದು, ಫಿಲಿಪ್ ಹಾಗೂ ದೇವಸ್ಥಾನದ ನಡುವೆ ಇರುವ ಜಾಗದ ತಕರಾರು ಹಿನ್ನಲೆಯಲ್ಲಿ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *