BELTHANGADI
ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಭೇಟಿ ಪರಿಶೀಲನೆ

ಬೆಳ್ತಂಗಡಿ ಸೆಪ್ಟೆಂಬರ್ 27: ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ರಾಜ್ಯ ಸರಕಾರ ನಿರ್ಮಿಸಿರುವ ಎಸ್ಐಟಿ ತಂಡ ಮಂಗಳೂರಿನಲ್ಲಿ ದೂರುದಾರ ವಿಚಾರಣೆ ಎರಡನೇ ದಿನವೂ ನಡೆಸಿದೆ.
ಬೆಳಿಗ್ಗೆ 10 ಗಂಟೆಯ ಬಳಿಕ ದೂರುದಾರನನ್ನು ಮತ್ತೆ ಮಲ್ಲಿಕಟ್ಟೆ ಐಬಿ ಕಚೇರಿಗೆ ಕರೆಸಿ ಮತ್ತೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಸ್ ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಅವರು ಹಾಜರಿದ್ದರು. ತನಿಖೆ ಮುಗಿದ ಬಳಿಕ ಮುಖ್ಯಸ್ಥ ಬೆಳ್ತಂಗಡಿಯ ನೂತನ ಎಸ್.ಐ.ಟಿ ಕಚೇರಿಗೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೊಸ ಕಟ್ಟಡದಲ್ಲಿ ಎಸ್.ಐ.ಟಿ ಕಚೇರಿಗೆ ವ್ಯವಸ್ಥೆ ಮಾಡಲಾಗಿದ್ದು. ಕಚೇರಿಯಲ್ಲಿ ಪರಿಶೀಲನೆ ಮಾಡಲು ಮಂಗಳೂರಿನಿಂದ ನೇರವಾಗಿ ಬೆಳ್ತಂಗಡಿಗೆ ಸಂಜೆ 6 ಗಂಟೆಗೆ ಆಗಮಿಸಿ ಪರಿಶೀಲನೆ ಮಾಡಿದರು.

ಸದ್ಯ ಎರಡನೇ ದಿನವೂ ದೂರುದಾರ ವಿಚಾರಣೆ ನಡೆಸಿರುವ ಎಸ್ಐಟಿ ತಂಡ ಮಾಹಿತಿ ಕಲೆ ಹಾಕಿದ್ದು, ಇನ್ನು ಬೆಳ್ತಂಗಡಿಯಿಂದಲೇ ಎಸ್ಐಟಿ ತಂಡ ಕಾರ್ಯಾ ನಿರ್ವಹಿಸುವ ಸಾಧ್ಯತೆ ಇದೆ.