BELTHANGADI
ಬೆಳ್ತಂಗಡಿ: ಆಸ್ತಿ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಬೆಳ್ತಂಗಡಿ: ಆಸ್ತಿ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಬೆಳ್ತಂಗಡಿ ಫೆಬ್ರವರಿ 10: ಸಂಬಂಧಿಗಳ ನಡುವೆ ಆಸ್ತಿ ವಿಚಾರದಲ್ಲಿ ನಡೆದ ಚರ್ಚೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ
ಉಮೇಶ್ ಸಮಗಾರ (50 ವರ್ಷ) ಕೊಲೆಯಾದ ವ್ಯಕ್ತಿ ವ್ಯಕ್ತಿಯಾಗಿದ್ದು, ತಂದೆ ಮಗ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ಆರೋಪಿಗಳಾದ ತಂದೆ ಯೋಗೀಶ್ ಮತ್ತು ಮಗ ಜೀವನ್ ರನ್ನು ಪೋಲೀಸರು ಬಂಧಿಸಿದ್ದಾರೆ.
ಕೊಲೆಯಾದ ಉಮೇಶ್ ಸಮಗಾರ ಅವರು ಮುಂಬೈನಲ್ಲಿ ಕೆಲಸದಲ್ಲಿದ್ದರು. ಊರಿಗೆ ಬಂದಿದ್ದ ವೇಳೆ ನಿನ್ನೆ ರಾತ್ರಿ ಸಂಬಂಧಿಗಳಾದ ಯೋಗೀಶ್ ಮತ್ತು ಜೀವನ್ ರ ಜೊತೆಗೆ ಆಸ್ತಿ ವಿಚಾರದಲ್ಲಿ ಚರ್ಚೆ ನಡೆದಿದೆ.


ಕೊಲೆ ಆರೋಪಿಗಳು
ಈ ವೇಳೆ ಯೋಗೀಶ್ ಮತ್ತು ಜೀವನ್ ಅವರು ಉಮೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.ಗಂಭೀರವಾಗಿ ಗಾಯಗೊಂಡಿದ್ದ ಉಮೇಶ್ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.