BELTHANGADI
ಬೆಳ್ತಂಗಡಿಯಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ

ಬೆಳ್ತಂಗಡಿ ಎಪ್ರಿಲ್ 02: ಬೆಳ್ತಂಗಡಿಯ ಹಲವು ಪ್ರದೇಶಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆ ಸುರಿದಿದೆ. ಬೆಳ್ತಂಗಡಿ, ಗುರುವಾಯನಕೆರೆ, ಅಳದಂಗಡಿ, ನಾರಾವಿ, ವೇಣೂರು, ಮುಂಡಾಜೆ, ಕಕ್ಕಿಂಜೆ, ಧರ್ಮಸ್ಥಳ, ಉಜಿರೆ, ನಡ, ನಿಡಿಗಲ್, ಪಣಕಜೆ ಸುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿದಿದೆ.
ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದ ಕಾಮಗಾರಿಗೆ ಅಡ್ಡಿ ಉಂಟಾಯಿತು. ನಿಡಿಗಲ್ ಮತ್ತು ಕಕ್ಕಿಂಜೆಯಲ್ಲಿ ರಭಸದ ಮಳೆಯಿಂದ ಕೆಸರು ನೀರು ರಸ್ತೆಯಲ್ಲೇ ಹರಿಯಿತು. ಕಾಮಗಾರಿಗಾಗಿ ಹಲವೆಡೆ ರಸ್ತೆ ಅಗೆಯಲಾಗಿದೆ. ಸಂಪರ್ಕ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ. ರಭಸವಾಗಿ ಸುರಿದ ಮಳೆಯಿಂದ ವಾಹಹನ ಸವಾರರು ತೊಂದರೆ ಅನುಭವಿಸಿದರು.

ಕಳೆದೊಂದು ವಾರದಿಂದ ಬಿಸಿಲಿನ ಧಗೆ ಹೆಚ್ಚಳದಿಂದ ಜನರು ತತ್ತರಿಸಿದ್ದರು. ನೀರಿನ ಕೊರತೆಯಿಂದ ಅಡಿಕೆ, ಕಾಳುಮೆಣಸಿನ ತೋಟಗಳು ಬಾಡಲು ಆರಂಭಿಸಿದ್ದವು. ಮಳೆಗಾಗಿ ಕಾಯುತ್ತಿದ್ದ ಜನರಿಗೆ ಬುಧವಾರ ಸುರಿದ ಮಳೆ ತಂಪಿನ ಅನುಭವ ನೀಡಿದೆ.