Connect with us

    BELTHANGADI

    ಮಂಗಳವಾರದಿಂದ ಮಧ್ಯಾಹ್ನ ಬಳಿಕ ಬೆಳ್ತಂಗಡಿ ತಾಲೂಕು ಸಂಪೂರ್ಣ ಬಂದ್

    ಬೆಳ್ತಂಗಡಿ ಜುಲೈ 11: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ ಬರುವ ಮಂಗಳವಾರದಿಂದ ಮಧ್ಯಾಹ್ನ ಬಳಿಕ ಬೆಳ್ತಂಗಡಿ ತಾಲೂಕು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತಿರ್ಮಾನಕ್ಕೆ ಬರಲಾಗಿದೆ.


    ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಲ್ಲಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನಲೆ ಇಂದು ಬೆಳ್ತಂಗಡಿಯಲ್ಲಿ ಸಭೆಯಲ್ಲಿ ಸೇರಿದ ಎಲ್ಲ ಪ್ರತಿನಿಧಿಗಳ ಒಕ್ಕೊರಲಿನ ಅಭಿಪ್ರಾಯ ದ ಮೇರೆಗೆ ತಾಲೂಕಿನಾದ್ಯಂತ ಮಧ್ಯಾಹ್ನ 2ಗಂಟೆವರೆಗೆ ಮಾತ್ರ ಅಂಗಡಿ ಗಳನ್ನು ತೆರೆಯುವುದು ಎಂಬ ತೀರ್ಮಾನ ವ್ಯಕ್ತವಾಯ್ತು. ಹಾಗೂ ತಾಲೂಕಿನ 9 ಖಾಸಗಿ ಆಸ್ಪತ್ರೆಗಳಲ್ಲಿ ಇನ್ನು ಮುಂದಕ್ಕೆ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 8 ಗಂಟೆಯವರೆಗೆ ಹೊರರೋಗಿ ವಿಭಾಗ ಲಭ್ಯವಿರುವುದಿಲ್ಲ ಹಾಗು ತುರ್ತು ಸೇವೆ, ಅಪಘಾತ ವಿಭಾಗ, ನೋಂದಾವಣೆ ವಿಭಾಗಗಳು ಎಂದಿನಂತೆ 24 ಗಂಟೆ ಕರ್ತವ್ಯ ನಿರ್ವಹಿಸುವುದು ಎಂದು ನಿರ್ಧಾರ ಕೈಗೊಳ್ಳಲಾಯಿತು. ಈ ಹಿನ್ನಲೆ ಮಂಗಳವಾರದಿಂದ 15 ದಿನಗಳ ಕಾಲ ಬೆಳ್ತಂಗಡಿ ತಾಲೂಕಿನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಯಿತು. ಶಾಸಕರ ಈ ನಿರ್ಧಾರಕ್ಕೆ ವ್ಯಾಪಾರಸ್ಥರು, ಅಂಗಡಿ ಮಾಲಕರು, ಆಟೋ, ಬಸ್ ಸೇರಿ ಎಲ್ಲರಿಂದಲೂ ಬೆಂಬಲ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply