BELTHANGADI
ಬೆಳ್ತಂಗಡಿ – ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಬೆಳ್ತಂಗಡಿ ಫೆಬ್ರವರಿ 09: ಮುಂಡಾಜೆ-ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಶುಕ್ರವಾರ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯೊಬ್ಬರು ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ಕಡಿರುದ್ಯಾವರದ ಅಂತರ ಲೋಕಯ್ಯ ಗೌಡ (65) ಎಂಬುವರಿಗೆ ದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿತ್ತು. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಘಟನೆ ಬಗ್ಗೆ ಬೈಕ್ ಸವಾರ ಚರಣ್ ರಾಜ್ ವಿರುದ್ದ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
1 Comment