BELTHANGADI
ಬೆಳ್ತಂಗಡಿ: ಆಯುಧ ಪೂಜೆ ವೇಳೆ ಹೃದಯಾಘಾತದಿಂದ ಯುವಕ ನಿಧನ
ಬೆಳ್ತಂಗಡಿ, ಅಕ್ಟೋಬರ್ 12: ಯುವಕನೊಬ್ಬ ಶುಕ್ರವಾರ ನಡೆದ ಆಯಧ ಪೂಜೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಅತ್ತಾಜೆ ರಮೇಶ್ ಭಟ್ ಮತ್ತು ಶಾರದ ದಂಪತಿಯ ಪುತ್ರ ಆದಿತ್ಯ ಭಟ್ (29) ಮೃತ ದುರ್ದೈವಿ. ಆದಿತ್ಯ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ನಡೆದ ಆಯುಧ ಪೂಜಾ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಹೃದಯ ಸ್ತಂಭನಕ್ಕೆ ಕಾರಣವಾಯಿತು.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆದಿತ್ಯ ಅವರು ಜರ್ಮನಿಯಲ್ಲಿ ಸ್ವಂತ ಸ್ಟಾರ್ಟಪ್ ನಡೆಸುತ್ತಿದ್ದರು. ಅವರು ತಂದೆ-ತಾಯಿ, ಸಹೋದರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
You must be logged in to post a comment Login