DAKSHINA KANNADA
ಬೆಳ್ಳಾರೆ- ಕೆಸರುಮಯ ರಸ್ತೆಯಲ್ಲಿ ಚಿಕ್ಕಮಕ್ಕಳ ಶ್ರಮದಾನ
ಪುತ್ತೂರು : ಶಾಲೆಗೆ ತೆರಳು ರೆಡಿಯಾಗ ಬೇಕಿದ್ದ ಪುಟಾಣೆ ಮಕ್ಕಳು ಶ್ರಮದಾನದ ಮೂಲಕ ರಸ್ತೆಯಲ್ಲಿ ಕೆಸರು ತೆಗೆಯುವ ಕೆಲಸ ಮಾಡುತ್ತಿರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲವಲಿಕೆಯಿಂದ ಸಮವಸ್ತ್ರ ಧರಿಸಿ ಶಾಲೆಗೆ ಹೋಗುವ ರಸ್ತೆ ತುಂಬಾ ಕೆಸರು. ಈ ರಸ್ತೆಯಲ್ಲಿ ಇನ್ನು ಮುಂದೆ ಹೋಗುವುದಾದರು ಹೇಗೆ ಎಂದು ಯೋಚಿಸಿ ಪುಟಾಣಿ ಮಕ್ಕಳಿಬ್ಬರು ಕೆಸರು ತುಂಬಿದ ರಸ್ತೆಯನ್ನು ಸರಿ ಪಡಿಸುವ ಮೂಲಕ ಸುದ್ದಿಯಾಗಿದ್ದು, ಸದ್ಯ ಚಿತ್ರವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ ಮಣ್ಣಿನ ರಸ್ತೆಯು ಕೆಸರುಮಯವಾಗಿದ್ದು, ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ. ಇದೀಗ ಪ್ರಾಥಮಿಕ ಶಾಲೆ ಆರಂಭಕ್ಕೆ ಸರಕಾರ ದಿನ ನಿಗದಿಪಡಿಸಿದ್ದು ಈ ರಸ್ತೆಯಲ್ಲಿ ನಡೆದುಕೊಂಡು ತಮ್ಮ ಶಾಲಾ ಸಮವಸ್ತ್ರ ಕೆಸರಾಗುವುದು ಗ್ಯಾರಂಟಿ ಎಂದು ತಿಳಿದ 2ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಹಾರೆ ಹಿಡಿದು ಕೆಸರನ್ನು ಬದಿಗೆ ಸರಿಸಿದರು. ಈ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಶಾಲಾ ಮಕ್ಕಳಿಗೆ ಇರುವ ಕಾಳಜಿ ಮಾತ್ರ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಲ್ಲದಾಗಿರುವುದು ಮಾತ್ರ ಶೋಚನೀಯ.