LATEST NEWS
ಬಿಜೈ – ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ವಿಧ್ಯಾರ್ಥಿ ಕವನ್ ಆಳ್ವ ಸಾವು..!!

ಮಂಗಳೂರು ಫೆಬ್ರವರಿ 21 : ಆಟೋ ರಿಕ್ಷಾವೊಂದು ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ಬಿಜೈನಲ್ಲಿ ನಡೆದಿದೆ. ಮೃತರನ್ನು ಬಿಜೈ ನಿವಾಸಿ ನಗರದ ಎಸ್ಡಿಎಂ ಕಾಲೇಜಿನಲ್ಲಿ ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿ ಕವನ್ ಆಳ್ವ(20) ಎಂದು ಗುರುತಿಸಲಾಗಿದೆ.
ಬಿಜೈ ಚರ್ಚ್ ಹಾಲ್ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು ಆಟೋ ಚಾಲಕ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಿಂದಲೇ ಯು ಟರ್ನ್ ತಿರುವು ತೆಗೆದುಕೊಂಡಿದ್ದ. ಮುಂದಿನಿಂದ ಬರುತ್ತಿದ್ದ ಬೈಕ್ ಸವಾರ ಆಯತಪ್ಪಿ ರಿಕ್ಷಾಗೆ ಡಿಕ್ಕಿಯಾಗಿದ್ದು ರಸ್ತೆ ಬದಿಯ ಮರಕ್ಕೆ ಹೋಗಿ ಬಡಿದಿದ್ದಾನೆ. ತಲೆಯ ಭಾಗ ನೇರವಾಗಿ ಮರಕ್ಕೆ ಬಡಿದಿದ್ದರಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದರಿಂದ ಯುವಕ ತನ್ನ ಜೀವ ಕಳೆದುಕೊಂಡಿದ್ದಾನೆ. ಕದ್ರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
VIDEO