LATEST NEWS
ಜೇನುಗೂಡಿಗೆ ಯಾರಾದ್ರೂ ಸಿಕ್ಸ್ ಹೊಡಿತಾರಾ…..!!

ಮಂಗಳೂರು ಫೆಬ್ರವರಿ 05: ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್ ಮೆನ್ ಹೊಡೆದ ಚೆಂಡು ಮರದಲ್ಲಿದ್ದ ಜೈನಿನ ಗೂಡಿಗೆ ಬಿದ್ದ ಪರಿಣಾಮ ಆಟಗಾರರ ಮೇಲೆ ಜೇನು ನೋಣ ದಾಳಿ ಮಾಡಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮೇಶ್ವರ ಒಂಭತ್ತುಕೆರೆಯ ಅನಿಲ ಕಂಪೌಂಡ್ ಎಂಬಲ್ಲಿ ಸ್ಥಳೀಯರೇ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಭಾನುವಾರ ನಡೆಯುತಿತ್ತು. ಈ ಸಂದರ್ಭ ಬ್ಯಾಟ್ಸ್ ಮೆನ್ ಓರ್ವರು ಹೊಡೆದ ಬಾಲ್ ತೆಂಗಿನಮರದಲ್ಲಿದ್ದ ಜೇನಿನ ಗೂಡಿಗೆ ಬಡಿದಿದೆ. ಗೂಡು ಒಡೆದ ಪರಿಣಾಮ ಜೇನು ನೊಣಗಳು ಬ್ಯಾಟ್ ಮೆನ್ ಸಮೇತ ಆಟಗಾರರ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ತಪ್ಪಿಸಲು ಕ್ರೀಡಾಂಗಣದಲ್ಲಿದ್ದ ಎಲ್ಲರೂ ಓಟಕ್ಕಿತ್ತು ಪಂದ್ಯಾಟವೇ ರದ್ದಾಗುವಂತಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
