KARNATAKA
ಮಳೆಗಾಲದ ತುಂಬಿ ಹರಿಯುವ ಕೊಳ,ಕೆರೆಗಳಲ್ಲಿ ಈಜುವಾಗ ಇರಲಿ ಜಾಗೃತೆ., ಎಡವಿದ್ರೆ ಜೀವಕ್ಕೆ ಅಪಾಯ..!
ಬಾಗಲಕೋಟೆ : ಅನೇಕ ಜನ ಮಳೆಗಾಲದಲ್ಲಿ ತುಂಬಿ ಹರಿಯುವ ಅಣೆಕಟ್ಟುಗಳು ಮತ್ತು ಕೊಳಗಳಿಗೆ ಹೋಗಿ ಈಜುವುದು, ಸ್ನಾನ ಮಾಡುವುದು ಸಹಜ. ಮಳೆಗಾಲದ ತುಂಬಿ ಹರಿಯುವ ಕೊಳ,ಕೆರೆಗಳಲ್ಲಿ ಈಜುವಾಗ, ಸ್ಥಾನ ಮಾಡುವಾಗ ಜಾಗೃತೆ ಅತೀ ಮುಖ್ಯವಾಗಿರಬೇಕಿದೆ. ಯಾಕೆಂದ್ರೆ ಈ ಸ್ಥಳಗಳು ದೊಡ್ಡ ದೊಡ್ಡ ಹಾವು, ವಿಷ ಜಂತುಗಳ ವಾಸ ಸ್ಥಾನವಾಗಿರುತ್ತೆ.
ಇದು ಪ್ರಾಣಕ್ಕೂ ಸಂಚಕಾರ ತರುವ ಸಾಧ್ಯತೆಗಳಿವೆ. ಇತ್ತೀಚೆಗೆ ಒಬ್ಬ ವ್ಯಕ್ತಿ ನದಿಯ ನೀರು ನೋಡಿ ಇಳಿದು ಅಲ್ಲಿ ಖುಷಿಯಿಂದ ಈಜಲು ಶುರುಮಾಡಿದ್ದಾನೆ. ಈ ಮಧ್ಯೆ ತಾನು ಧರಿಸಿದ ಬಟ್ಟೆ ಒಳಗೆ ಏನೋ ಜಾರಿದಂತೆ ಅವನಿಗೆ ಅನಿಸಿತು. ಕೂಡಲೇ ಆತ ನೀರಿನಿಂದ ಮೇಲೆ ಬಂದು ತನ್ನ ಬಟ್ಟೆಯನ್ನು ಮೇಲಕ್ಕೆತ್ತಿದಾಗ ಅದರೊಳಗೆ ದೊಡ್ಡ ಹಾವು ಸೇರಿಕೊಂಡಿರುವುದು ಕಂಡುಬಂದಿದೆ. ಈ ಸಂದರ್ಭ ಆತನ ಸ್ಥಿತಿ ಊಹಿಸಲು ಅಸಾಧ್ಯ. ಹೆದರಿದ ಆತ ಅದು ಎಲ್ಲಿ ತನಗೆ ಕಚ್ಚುತ್ತದೆ ಎಂದು ಭಯ ಭೀತನಾಗಿ ಕೊನೆಗೆ ಹಾವನ್ನು ಹಿಡಿದು ಹೊರಗೆ ಎಸೆದು ಓಟಕ್ಕಿತ್ತಿದ್ದಾನೆ. ಪ್ರಸ್ತುತ ಹಾವು ಕಚ್ಚದ ಕಾರಣ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಗುತ್ತಿದ್ದಾರೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳಿಗೆ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೊ ತಿಳಿಸಿರುವುದು ಮಾತ್ರ ಸತ್ಯವಾಗಿದೆ. .