LATEST NEWS
ಗೋಕಳ್ಳತನ ಮರುಕಳಿಸುತ್ತಿದ್ದರೆ ಮಹಿಳೆಯರು ಮನೆಯಲ್ಲಿ ತಲ್ವಾರ್ ಹಿಡಿಯಬೇಕಾಗುತ್ತದೆ

ಗೋಕಳ್ಳತನ ಮರುಕಳಿಸುತ್ತಿದ್ದರೆ ಮಹಿಳೆಯರು ಮನೆಯಲ್ಲಿ ತಲ್ವಾರ್ ಹಿಡಿಯಬೇಕಾಗುತ್ತದೆ
ಮಂಗಳೂರು ಜುಲೈ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರು ಗೋಗಳ್ಳತನ ಪ್ರಕರಣ ವಿರುದ್ದ ವಿಶ್ವ ಹಿಂದೂ ಪರಿಷತ್ ಬೃಹತ್ ಪ್ರತಿಭಟನಾ ಸಭೆ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಗಳ್ಳತನ ವನ್ನು ವಿರೋಧಿಸಿ ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ಇಂದು ಸಂಜೆ ಬೃಹತ್ ಪ್ರತಿಭಟನಾ ಸಭೆ ನಡೆದಿದೆ.
ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಮುರಳಿಕೃಷ್ಣ ಹಂಸತಡ್ಕ ಗೋ ರಕ್ಷಣೆಗೋಸ್ಕರ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತದೆ ಎಂದು ಎಚ್ಚರಿಸಿದರು. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಹಿಂದೂ ಮಹಿಳೆಯರು ಮನೆಯಲ್ಲಿ ತಲ್ವಾರು ಹಿಡಿಯಬೇಕಾಗುತ್ತದೆ ಎಂದು ಹೇಳಿದ ಅವರು ಗೋಕಳ್ಳತನ ಮುಂದುವರೆದಲ್ಲಿ ಸಂಘಟನೆಯಿಂದಲೇ ನಿರ್ದಾಕ್ಷಿಣ್ಯ ಕ್ರಮ ಕೈ ಗೊಳ್ಳಲಾಗುವುದೆಂದು ಅವರು ಎಚ್ಚರಿಸಿದರು. ಗೋಕಳ್ಳತನ ಮರುಕಳಿಸುತ್ತಿದ್ದರೆ ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ಆಗಲಿದೆ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ಪಂಪ್ ವಲ್ , ವಿ ಎಚ್ ಪಿ ಆರಂಭಿಸಲು ಉದ್ದೇಶಿಸಿರುವ ಗ್ರಾಮ ಗೋರಕ್ಷಕ ದಳದ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ ಡಿ ಪಿ ಐ ಮುಖಂಡರು ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಮನವಿ ಮಾಡಿದ್ದು ಯಾಕೆ ? ಎಂದು ಪ್ರಶ್ನಿಸಿದರು. ಇದರ ಅರ್ಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಹಾಗು ಗೋ ಗಳ್ಳತನಕ್ಕೆ ಎಸ್ ಡಿ ಪಿ ಐ ಹಾಗು ಪಿ ಎಫ್ ಐ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
VIDEO