Connect with us

    BANTWAL

    ಬಿ. ಸಿ ರೋಡ್ ತಲಪಾಡಿ ಟೋಲ್ ಗೇಟ್ ಸಿಬ್ಬಂದಿಯಿಂದ ಮಹಿಳೆ ಮೇಲೆ ಹಲ್ಲೆ-ಆಸ್ಪತ್ರೆಗೆ ದಾಖಲು

    ಬಿ. ಸಿ ರೋಡ್ ತಲಪಾಡಿ ಟೋಲ್ ಗೇಟ್ ಸಿಬ್ಬಂದಿಯಿಂದ ಮಹಿಳೆ ಮೇಲೆ ಹಲ್ಲೆ-ಆಸ್ಪತ್ರೆಗೆ ದಾಖಲು

    ಬಂಟ್ವಾಳ ಅಕ್ಟೋಬರ್ 4: ಬಿ ಸಿ ರೋಡಿನ ತಲಪಾಡಿ ಟೋಲ್ ಗೇಟ್ ಸಿಬ್ಬಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಗಾಯಗೊಂಡ ಮಹಿಳೆಯನ್ನು ವಳಚ್ಚಿಲ್ ನಿವಾಸಿ ತಾಝಿಯಾ ಎಂದು ಗುರುತಿಸಲಾಗಿದೆ. ತಾಝಿಯಾ ಅವರ ಗಂಡ ಸದಾಖತ್ ಅವರು ಸಜೀಪ ಮನೆಯಿಂದ ವಳಚ್ಚಿಲ್ ಕಡೆಗೆ ಪ್ರಯಾಣಿಸುವ ವೇಳೆ ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ನೀಡದೆ ಮುಂದೆ ಹೋದರು ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಇವರು ಪ್ರಯಾಣಿಸುತ್ತಿದ್ದ ಟಾಟಾ ಇಂಡಿಕಾ ಕಾರಿನ ಮುಂಬಾಗದ ಗ್ಲಾಸಿಗೆ ಗುದ್ದಿದ್ದಾರೆ.

    ಗ್ಲಾಸಿಗೆ ಗುದ್ದಿ ಪರಿಣಾಮ ಕಾರಿನ ಗ್ಲಾಸು ಹೊಡೆದು ಕಾರಿನಲ್ಲಿ ಕುಳಿತು ಕೊಂಡಿದ್ದ ತಾಝಿಯಾ ಅವರ ಕಣ್ಣಿಗೆ ಗಾಜು ತಾಗಿ ಗಾಯಗಳಾಗಿವೆ. ಗಾಯಗೊಂಡ ಇವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಬಿ ಸಿ. ರೋಡ್ ತಲಪಾಡಿ ಟೋಲ್ ಗೇಟ್ ನಲ್ಲಿರುವ ಸಿಬ್ಬಂದಿಗಳು ಕೇವಲ ಟೋಲ್ ವಸೂಲಿ ಅಲ್ಲದೆ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಕಂಡು ಬರುತ್ತಿದೆ. ಕಳೆದ ವಾರ ಕೂಡಾ ಇದೇ ರೀತಿ ವಾಹನ ಚಾಲಕನೋರ್ವನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಅತನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೂ ಇವರ ಮೇಲೆ ಪೊಲೀಸರು ಕ್ರಮಕೈಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಟೋಲ್ ಗೇಟ್ ನಲ್ಲಿ ಜಾತೀವಾದ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಅಬ್ಬಾಸ್ ಮಾಡಿದ್ದಾರೆ. ಮಹಿಳೆಯರು ಪ್ರಯಾಣಿಸುವ ಸಂದರ್ಭದಲ್ಲಿ ಅನೇಕ ಬಾರಿ ಇಂತಹ ಘಟನೆಗಳು ನಡೆದಿವೆ. ಇಂತಹ ಪ್ರಕರಣ ಗಳು ಪುನಾರವರ್ತನೆ ಆಗಬಾರದು ಅವರ ವಿರುದ್ದ ಕಠಿಣ ಕ್ರಮ ಕೈಕೊಳ್ಳಬೇಕುಎಂದು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *