KARNATAKA
ಬೆಂಗಳೂರಿನಲ್ಲಿ ಮನೆ ಕಾಂಪೌಂಡ್ ಒಳಗಿನ ಪಾರ್ಕಿಂಗ್ಗೂ ಕಟ್ಟಬೇಕು ಟ್ಯಾಕ್ಸ್

ಬೆಂಗಳೂರು ಎಪ್ರಿಲ್ 01: ಎಪ್ರಿಲ್ ನಲ್ಲಿ ರಾಜ್ಯ ಸರಕಾರ ಹಾಲು , ವಿದ್ಯುತ್ ದರ ಏರಿಕೆ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಇದೀಗ ಬಿಬಿಎಂಪಿ ವಾಹನ ಪಾರ್ಕಿಂಗ್ ಮಾಡಿದ್ದಕ್ಕೂ ಟ್ಯಾಕ್ಸ್ ಹಾಕಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಬಿಬಿಎಂಪಿ ಹೊರಡಿಸಿದೆ. ಅಧಿಸೂಚನೆ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
ನಿಮ್ಮ ಮನೆಯ ಕಾಂಪೌಂಡ್, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಿದೆ. ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 2 ರೂ.) ವಸೂಲಿ ಮಾಡಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.

ಮೊದಲೆಲ್ಲ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕಮರ್ಷಿಯಲ್ ಇದ್ದರೇ, ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ವಸತಿ ಇದ್ದರೇ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ತೋಚಿದಷ್ಟು ವಸೂಲಿ ಮಾಡಲಾಗುತ್ತಿತ್ತು. ಆದರೆ, ಇದೀಗ ಪಾರ್ಕಿಂಗ್ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.
1 Comment