FILM
ದೋಸ್ತ್ ಧನರಾಜ್ ಗೆ ಕೊನೆ ಕ್ಷಣದಲ್ಲಿ ಕೈಕೊಟ್ಟ ಹನುಮಂತು
ಬೆಂಗಳೂರು ಜನವರಿ 18: ಬಿಗ್ ಬಾಸ್ ಸೀಸನ್ 11 ಕೊನೆಯ ಹಂತದಲ್ಲಿದೆ. ಇನ್ನೇನು ಒಂದೇ ವಾರದಲ್ಲಿ ಈ ಬಾರಿ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎನ್ನುವುದು ತಿಳಿದು ಬರಲಿದೆ. ಈ ನಡುವೆ ಈ ವಾರ ಫೈನಲ್ ಗೆ ಪ್ರವೇಶ ಪಡೆಯಲು ಇದ್ದ ಅವಕಾಶ ಕಳೆದುಕೊಂಡಿದ್ದ ಧನರಾಜ್ ಗೆ ಅವರ ದೋಸ್ತ್ ಹನುಮಂತು ಕೂಡ ಸಹಾಯಕ್ಕೆ ಬರಲಿಲ್ಲ.
ವಾರದ ಟಾಸ್ಕ್ ನಲ್ಲಿ ಗೆದ್ದು ನಾಮಿನೇಷನ್ ನಿಂದ ಪಾರಾಗಿದ್ದ ಧನರಾಜ್ ತಮ್ಮ ಮೋಸದ ಆಟದಿಂದಾಗಿ ಬಿಗ್ ಬಾಸ್ ನಿಂದ ನೇರ ನಾಮಿನೇಷನ್ ಆಗಿದ್ದರು. ಈ ನಡುವೆ ಬಿಗ್ ಬಾಸ್ ಕ್ಯಾಪ್ಟನ್ ಆಗಿರುವ ಹನುಮಂತು ಅವರಿಗೆ ಒಬ್ಬರನ್ನು ಫೈನಲ್ ಗೆ ಕಳುಹಿಸುವ ಅವಕಾಶ ನೀಡಿದ್ದರು.
ಎಲ್ಲರೂ ಹನುಮಂತು ಧನರಾಜ್ ಅವರ ಹೆಸರನ್ನು ಹೇಳುತ್ತಾರೆ ಎಂದು ತಿಳಿದಿದ್ದರು, ಆದರೆ ಆಗಿದ್ದೆ ಬೇರೆ, ಹನುಮಂತು ಅಚ್ಚರಿ ಎಂಬಂತೆ ಮೋಕ್ಷಿತಾ ಅವರನ್ನು ಬಿಗ್ ಬಾಸ್ ಫಿನಾಲೆ ಗೆ ಕಳುಹಿಸಿದ್ದಾರೆ. ಧನರಾಜ್ ಮತ್ತು ಹನುಮಂತು ದೋಸ್ತ್ ಆಗಿದ್ದು, ಎಲ್ಲರೂ ಹನುಮಂತು ದೋಸ್ತ್ ಧನರಾಜ್ ಗೆ ಮತ್ತೊಂದು ಅವಕಾಶ ನೀಡುತ್ತಾರೆ ಎಂದು ಕೊಂಡಿದ್ದರು. ಆದರೆ ಹನುಮಂತು ಚಾಣಾಕ್ಷತನದ ಆಟಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಕೊನೆ ಕ್ಷಣದಲ್ಲಿ ದೋಸ್ತ್ ಧನರಾಜ್ ಗೆ ಹನುಮಂತು ಕೈಕೊಟ್ಟಿದ್ದಾನೆ.