KARNATAKA
ಬಂಗಾಳ ಕೊಲ್ಲಿ ಚಂಡಮಾರುತ ಭೀತಿ: ಆಂಧ್ರಪ್ರದೇಶದ ಎಲ್ಲಾ ಶಾಲೆಗಳಿಗೆ 2 ದಿನ ರಜೆ, ರೈಲು ಪ್ರಯಾಣ ರದ್ದು..!
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಭೀಓತಿ ನೆರೆಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ತಲೆದೋರಿದ್ದು ಇಂದು( ಸೋಮವಾರ ಮತ್ತು ಮಂಗಳವಾರ)ನ ಭಾರಿ ಗಾಳಿ ಮಳೆಯ ನಿರೀಕ್ಷೆ ಇದ್ದು ಶಾಲಾ ಕಾಲೇಜುಗಳಿಗೆ 2 ದಿನ ರಜೆ ಘೋಷಣೆ ಮಾಡಲಾಗಿದೆ.
ನೆಲ್ಲೂರು ಮತ್ತು ಮಚಲಿಪಟ್ನಂ ನಡುವೆ ಈ ಚಂಡಮಾರುತ ಅಪ್ಪಳಿಸಲಿದ್ದು, ಬಾಪಟ್ಲಾ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 4 ಮತ್ತು 5 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದಲ್ಲದೆ, ರಾಜ್ಯದ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.ಚಂಡಮಾರುತದ ಸನ್ನದ್ಧತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಸಾರ ಮಾಡಲು ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದ್ದಾರೆ. ಈ ಮಧ್ಯೆ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ರೈತರಿಗೆ ಈ ಅನಿರೀಕ್ಷಿತ ಚಂಡಮಾರುತ ಆತಂಕವನ್ನುಂಟುಮಾಡಿದೆ. 45,000 ಕ್ಕೂ ಹೆಚ್ಚು ರೈತರು 1.3 ಲಕ್ಷ ಎಕರೆಯಲ್ಲಿ ಭತ್ತವನ್ನು ಬೆಳೆದಿದ್ದಾರೆ. ಶೇ 25 ರಷ್ಟು ಬೆಳೆಯನ್ನು ಈಗಾಗಲೇ ಕೊಯ್ಲು ಮಾಡಲಾಗಿದ್ದು, ಶೇ 75 ರಷ್ಟು ಕೊಯ್ಲಿಗೆ ಸಿದ್ಧವಿದೆ.
ಭಾರಿ ಮಳೆಯಿಂದಾಗಿ ವ್ಯಾಸರಪಾಡಿ ಮತ್ತು ಬೇಸಿನ್ ಬ್ರಿಡ್ಜ್ ನಡುವಿನ ಸೇತುವೆ ಸಂಖ್ಯೆ 14ರಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟವನ್ನು ತಲುಪಿದ್ದು, ಸೋಮವಾರ ಚೆನ್ನೈ ಸೆಂಟ್ರಲ್‌ನಿಂದ ಹನ್ನೊಂದು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.’ಚೆನ್ನೈನಲ್ಲಿ ಭಾರಿ ಮಳೆ ಮತ್ತು ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ನಿಲ್ದಾಣಗಳ ನಡುವಿನ ಸೇತುವೆ ನಂ.14 ರಲ್ಲಿ ನೀರು ಅಪಾಯದ ಮಟ್ಟವನ್ನು ದಾಟುತ್ತಿರುವ ಹಿನ್ನೆಲೆಯಲ್ಲಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರ ಜೊತೆ 12007 ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್, 12675 ಕೊಯಮತ್ತೂರು ಕೋವೈ ಎಕ್ಸ್‌ಪ್ರೆಸ್, 12243 ಕೊಯಮತ್ತೂರು ಶತಾಬ್ದಿ ಎಕ್ಸ್‌ಪ್ರೆಸ್, 22625 ಕೆಎಸ್‌ಆರ್ ಬೆಂಗಳೂರು ಎಸಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್, 12639 ಕೆಎಸ್‌ಆರ್ ಬೆಂಗಳೂರು ಬೃಂದಾವನ ಎಕ್ಸ್‌ಪ್ರೆಸ್ ಮತ್ತು 16057 ತಿರುಪತಿ ಸಪ್ತಗಿರಿ ಎಕ್ಸ್‌ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಮೇಲ್ಕಂಡ ರೈಲುಗಳ ರದ್ದತಿಯಿಂದಾಗಿ ಈ ಮಾರ್ಗದ ರೈಲುಗಳಲ್ಲಿ ಪ್ರಯಾಣಿಸಲು ನಿಗದಿಪಡಿಸಲಾದ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿಯನ್ನು ಒದಗಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ. ಗುಗನೇಸನ್ ತಿಳಿಸಿದ್ದಾರೆ.