KARNATAKA
ಅಯೋಧ್ಯೆ ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆ ಪ್ರಯಾಣ!
ದೊಡ್ಡಬಳ್ಳಾಪುರ: ಅಯೋಧ್ಯೆಯ ರಾಮನ ದರ್ಶನ ಪಡೆದು ಸುದ್ದಿಯಾಗಿದ್ದ ಬಸಪ್ಪ ಎಂದೇ ಹೆಸರು ಪಡೆದಿರುವ ಎತ್ತು ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಪಡೆಯಲು ಹೊರಟಿದೆ. ತಾಲೂಕಿನ ಪೆರಮಗೊಂಡನಹಳ್ಳಿಯಲ್ಲಿರುವ ದಿನ್ನೆ ಆಂಜನೇಯಸ್ವಾಮಿ ದೇವಾಲಯದಿಂದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು “ಬಸಪ್ಪ’ ಪಯಣ ಬೆಳೆಸಿತು.
ಬಸಪ್ಪನ ಪ್ರಯಾಣಕ್ಕಾಗಿಯೇ ಪ್ರತ್ಯೇಕವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಸಪ್ಪನಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸುವ ಜವಾಬ್ದಾರಿಯನ್ನು ವಾಸುದೇವಾ ಚಾರ್ ಅವರು ಹೊತ್ತಿದ್ದು, ಈಗಾಗಲೇ ಇದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.
ನಿನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾಸುದೇವಾಚಾರ್ ನೇತೃತ್ವದಲ್ಲಿ ಪೆರಮಗೊಂಡನಹಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ಭಜನೆ ಹಾಗೂ ಇತರೆ ಎಲ್ಲಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಬಸಪ್ಪನ ಯಾತ್ರೆಗೆ ಚಾಲನೆ ನೀಡಲಾಯಿತು.
ಅಯ್ಯಪ್ಪ ದರ್ಶನ ನಂತರ ಮಾರ್ಗ ಮಧ್ಯೆ ಬರುವಂತಹ ಎಲ್ಲಾ ದೇವರ ದರ್ಶನ ಮಾಡಿಸಲಾಗುವುದು. ಬಳಿಕ ಮುಂದಿನ ತೀರ್ಥಯಾತ್ರೆ ತಮಿಳುನಾಡಿನ ರಾಮೇಶ್ವರಂನತ್ತ ಹೊರಡಲಿದೆ. ಇದಕ್ಕೆ ಎಲ್ಲಾ ಸಿದ್ಧತೆ ಮುಂದಿನ ದಿನಗಳಲ್ಲಿ ನಡೆಸಲಾ ಗುವುದು ಎಂದು ವಾಸುದೇವಾ ಚಾರ್ ತಿಳಿಸಿದರು.