LATEST NEWS
ಬಪ್ಪನಾಡು ಜಾತ್ರೋತ್ಸವ – ಮಳಿಗೆ ತೆರೆಯದ ಮುಸ್ಲಿಂ ವ್ಯಾಪಾರಸ್ಥರು….!!

ಮಂಗಳೂರು ಮಾರ್ಚ್ 23: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ನಡುವೆಯೂ ಬಪ್ಪನಾಡು ಜಾತ್ರೋತ್ಸವ ಪ್ರಾರಂಭವಾಗಿದ್ದು, ಇಂದು ಮಧ್ಯಾಹ್ನ ದೇವರ ಹಗಲು ರಥೋತ್ಸವ ನಡೆಯಲಿದೆ. ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ಹಿನ್ನಲೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕರಾವಳಿಯಲ್ಲಿ ಹಿಜಬ್ ವಿವಾದದ ಬಳಿಕ ಪ್ರಾರಂಭವಾದ ಹಿಂದೂ ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂ ರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಅಭಿಯಾನ ಮುಂದುವರೆದಿದ್ದು, ಇತಿಹಾಸ ಪ್ರಸಿದ್ದ ಬಪ್ಪನಾಡು ಕ್ಷೇತ್ರದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸುವ ಬ್ಯಾನರ್ ಹಾಕಲಾಗಿದೆ.

ಜಾತ್ರೆಯಲ್ಲಿ ವ್ಯಾಪಾರ ಮಳಿಗೆಗಾಗಿ ಸುಮಾರ 80 ಕ್ಕೂ ಅಧಿಕ ಮಂದಿ ಮುಸ್ಲಿಂ ವ್ಯಾಪಾರಸ್ಥರು ನೊಂದಾಯಿಸಿದ್ದರು, ಆದರೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಯಾರೂ ಕೂಡ ಮಳಿಗೆಯನ್ನು ಓಪನ್ ಮಾಡಿಲ್ಲ.