BANTWAL
ಬಂಟ್ವಾಳ : ಹತೋಟಿಗೆ ಬಾರದ ಜ್ವರ, ಯುವಕ ಮೃತ್ಯು..!
ಬಂಟ್ವಾಳ: ಹತೋಟಿಗೆ ಬಾರದ ಜ್ವರದಿಂದ ಯುವಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೇಗಿನಪೇಟೆ ಬಳಿ ನಡೆದಿದೆ.
ಅಬೂಬಕ್ಕರ್ ಸಿದ್ದೀಕ್ (30) ಮೃತ ಯುವಕನಾಗಿದ್ದಾನೆ. ಎರಡು, ಮೂರು ದಿನಗಳ ವಿಪರೀತ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅಬೂಬಕ್ಕರ್ ಸಿದ್ದೀಕ್ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಃ ವಿಟ್ಲ ಸಮೀಪದ ಮೇಗಿನಪೇಟೆ ಕಾಟ್ರಸ್ ನಿವಾಸಿಯಾದ್ದ ಇವರು, ಪ್ರಸ್ತುತ ವಿಟ್ಲ ಸಮೀಪದ ಮಂಗಿಲಪದವು ಬಾಬಟ್ಟ ಬನಾರಿ ಎಂಬಲ್ಲಿ ನೆಲೆಸಿದ್ದರು.