BANTWAL
ಬಂಟ್ವಾಳ : ಬೈಕ್ ಅಪಘಾತದ ಗಾಯಾಳುವಿಗೆ ಆರ್ಥಿಕ ಶಕ್ತಿ ತುಂಬಿದ ಸಿಂತಾನಿಕಟ್ಟೆ ಬಜರಂಗದಳ..!

ಬಂಟ್ವಾಳ : ಬೈಕ್ ಅಪಘಾತದಲ್ಲಿ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಗಾಯಾಳು ಕುಟುಂಬಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಸ್ಪಂದಿಸಿದೆ.
ಸಂಘಟನೆ ಮುಂದಾಳತ್ವದಲ್ಲಿ ಎಲ್ಲಾ ಸಂಘಟನೆಗಳ ಮತ್ತು ಊರ ಹಾಗೂ ಪರವೂರ ದಾನಿಗಳ ಸಹಾಯದಿಂದ ಒಟ್ಟು ಗೂಡಿದ ಸಹಾಯಧನದ ಮೊತ್ತ 60,153 ರೂಪಾಯಿಯನ್ನು ಬೈಕ್ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆ ಆಗಿರುವ ಮನೋಹರ್ ಕಲ್ಲಡ್ಕ ಇವರ ಮನೆಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಭಜರಂಗದಳ ಜಿಲ್ಲಾ ಸಂಯೋಜಕರಾದ ಭರತ್ ಕುಮ್ಡೆಲ್ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ಸಪ್ತಾಹಿಕ್ ಪ್ರಮುಖ್ ಪ್ರಶಾಂತ್ ಕೊಟ್ಟಾರಿ ಹಾಗೂ ಜವಾಬ್ದಾರಿಯುತ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.