LATEST NEWS
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟುನಿಂತ ಲಾರಿಯಿಂದ 2 ಗಂಟೆ ಟ್ರಾಫಿಕ್ ಜಾಮ್..! ಕೇಸು ದಾಖಲು
ಬಂಟ್ವಾಳ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಸಿರೋಡಿನ ಎನ್.ಜಿ.ಸರ್ಕಲ್ ಬಳಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮವಾಗಿ ಎರಡು ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾದ ಘಟನೆ ನಡೆಯಿತು.
ಅಧಿಕ ಪ್ರಮಾಣದಲ್ಲಿ ಸಾಮಾಗ್ರಿಗಳನ್ನು ತುಂಬಿಸಿಕೊಂಡಿದ್ದ ಲಾರಿ ಬಿಸಿರೋಡಿನ ಎನ್.ಜಿ.ಸರ್ಕಲ್ ನಲ್ಲಿ ಮುಂದೆ ಹೋಗಲಾರದೆ ಕೆಟ್ಟು ನಿಂತಿದೆ.
ಮಂಗಳೂರು ಕಡೆಯಿಂದ ಬೆಂಗಳೂರಿಗೆ ತೆರಳುವ ವೇಳೆ ಲಾರಿಕೆಟ್ಟು ನಿಂತಿತ್ತು.
ಲಾರಿ ಹೆದ್ದಾರಿಯ ಮಧ್ಯ ಭಾಗದಲ್ಲಿ ಕೆಟ್ಟು ನಿಂತ ಕಾರಣದಿಂದ ಬೆಳಿಗ್ಗೆ ಹೊತ್ತಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ, ವಿದ್ಯಾರ್ಥಿಗಳ ಸಹಿತ ಕೆಲಸಕ್ಕೆ ತೆರಳುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಯಿತು.
ಕೊನೆಗೂ ಲಾರಿಯನ್ನು ರಸ್ತೆ ಯಿಂದ ತೆರವುಗೊಳಿಸದೆ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರ ಕಾಣುವುದಿಲ್ಲ ಎಂದು ಅರಿತ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಕ್ರೇನ್ ತರಿಸಿ ಲಾರಿಯನ್ನು ರಸ್ತೆಯಿಂದ ತೆರವು ಮಾಡಿದರು.
ಬೆಳಿಗ್ಗೆ 7 ಗಂಟೆಯಿಂದ ಸುಮಾರು 9 ಗಂಟೆವರೆಗೂ ಇಲ್ಲಿ ಪುಲ್ ಬ್ಲಾಕ್ ಆಗಿತ್ತು.
ಓವರ್ ಲೋಡ್ ಹಾಕಿ ಕೆಟ್ಟು ನಿಂತ ಲಾರಿಯ ಮೇಲೆ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.