BANTWAL
ಬಂಟ್ವಾಳ – ಒಂಟಿ ಮಹಿಳೆ ಇದ್ದ ಬಟ್ಟೆ ಅಂಗಡಿಗೆ ನುಗ್ಗಿ ಬಟ್ಟೆ ದರೋಡೆ

ಬಂಟ್ವಾಳ ಮಾರ್ಚ್ 19: ಶಿಪ್ಟ್ ಕಾರಿನಲ್ಲಿ ಬಂದ ತಂಡವೊಂದು ಹಾಡುಹಗಲೇ ಒಂಟಿ ಮಹಿಳೆಯಿದ್ದ ಬಟ್ಟೆ ಮಳಿಗೆಗೆ ನುಗ್ಗಿ ಬಟ್ಟೆ ದರೋಡೆ ಮಾಡಿದ ಘಟನೆ ಬಂಟ್ವಾಳದ ವಿಟ್ಲ ಪೇಟೆಯಲ್ಲಿ ನಡೆದಿದೆ.
ಶಿಫ್ಟ್ ಕಾರಿನಲ್ಲಿ ಬಂದ ತಂಡ ಮಳಿಗೆಯಲ್ಲಿದ್ದ ಮಹಿಳೆಯನ್ನು ಬೆದರಿಸಿ ಬಟ್ಟೆ ಹೊತ್ತೊಯ್ದಿದೆ. ಮಾರ್ಚ್ 18 ರಂದು ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಏಕಾಏಕಿ ಅಂಗಡಿಗೆ ಅಕ್ರಮ ಪ್ರವೇಶಿಸಿದ ನಾಲ್ಕು ಮಂದಿಯ ತಂಡ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತಮ್ಮ ಬ್ಯಾಗಿನೊಳಗೆ ತುಂಬಿಸಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಸಿಬ್ಬಂದಿಯು ಯಾಕೆ ಬಟ್ಟೆಗಳನ್ನು ತುಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು “ನಿನಗೆ ಎಷ್ಟು ಕೆಲಸವಿದೆಯೋ ಅಷ್ಟೇ ಮಾಡು, ನಮ್ಮ ಸುದ್ದಿಗೆ ಬಂದ್ರೆ ಜಾಗ್ರತೆ” ಎಂದು ಬೆದರಿಸಿ ಬಲಾತ್ಕಾರದಿಂದ ಬಟ್ಟೆ ಮತ್ತು ವಸ್ತುಗಳನ್ನು ಕೊಂಡೊಯ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
