BANTWAL
ಬಂಟ್ವಾಳ : ಉದ್ಯೋಗ ಖಾತರಿ ಯೋಜನೆಗೆ ಅ.31ರೊಳಗೆ ಬೇಡಿಕೆ ಸಲ್ಲಿಸಿ..!

“ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ” ಅಭಿಯಾನಕ್ಕೆ ಅ.9 ರಂದು ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಕಟ್ಟೆ ಅಂಗನವಾಡಿ ಬಳಿ ಗ್ರಾಮ ಅಧ್ಯಕ್ಷೆ ಸುಜಾತಾ ಎ. ಚಾಲನೆ ನೀಡಿದರು.
ಬಂಟ್ವಾಳ: “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ” ಅಭಿಯಾನಕ್ಕೆ ಅ.9 ರಂದು ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಕಟ್ಟೆ ಅಂಗನವಾಡಿ ಬಳಿ ಗ್ರಾಮ ಅಧ್ಯಕ್ಷೆ ಸುಜಾತಾ ಎ. ಚಾಲನೆ ನೀಡಿದರು.

ಕಾರ‍್ಯಕ್ರಮದಲ್ಲಿ ಮಾತನಾಡಿದ ಗ್ರಾಪಂ ಪಿಡಿಒ ವಿಶ್ವನಾಥ್ ಬಿ., ನರೇಗಾ ಯೋಜನೆಯಡಿ 2024-25ನೇ ಸಾಲಿನ ಕ್ರಿಯಾಯೋಜನೆ ತಯಾರಿ ಹಿನ್ನೆಲೆಯಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.
ಅಲ್ಲದೇ ಮನೆ-ಮನೆ ಭೇಟಿ ಮೂಲಕವೂ ಕಾಮಗಾರಿ ಬೇಡಿಕೆ ಸ್ವೀಕರಿಸಲಾಗುತ್ತದೆ.
ಪ್ರತಿ ಅರ್ಹ ಫಲಾನುಭವಿಗಳು ಯೋಜನೆಯಡಿ ಕಾಮಗಾರಿ ಕೈಗೊಳ್ಳಬೇಕು.
ತೆರೆದ ಬಾವಿ, ಅಡಿಕೆ, ಬಚ್ಚಲು ಗುಂಡಿ, ದನದ ಹಟ್ಟಿ ಸೇರಿದಂತೆ ವಿವಿಧ ಹೊಸದಾಗಿ ಕೈಗೊಳ್ಳುವ ಕಾಮಗಾರಿಗಳಿಗೆ ಸಹಾಯಧನ ಪಡೆಯಲು ಅವಕಾಶವಿದ್ದು, ಅಕ್ಟೋಬರ್ 31ರೊಳಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ವಾಹನ ಪ್ರಚಾರದ ಮೂಲಕ ಪ್ರಚಾರ ನಡೆಸಲಾಯಿತು. ಮನೆ-ಮನೆ ಭೇಟಿ ನಡೆಸಲಾಯಿತು.
ತಾಲೂಕು ಐಇಸಿ ಸಂಯೋಜಕ ರಾಜೇಶ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಎಂಬಿಕೆ, ಕೃಷಿ ಸಖಿ, ಗ್ರಾಮಸ್ಥರು ಉಪಸ್ಥಿತರಿದ್ದರು..