BANTWAL
ಬಂಟ್ವಾಳ ಚೂರಿ ಇರಿತಪ್ರಕರಣ , ಮೂವರು ಆರೋಪಿಗಳ ಬಂಧನ..!
ಬಂಟ್ವಾಳ: ಹುಲಿ ವೇಷಧಾರಿಗಳ ವೈಯಕ್ತಿಕ ವಿಚಾರಕ್ಕೆ ಮೂರು ಮಂದಿಯ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶೋಧನ್,ಪ್ರಕಾಶ್ ಯಾನೆ ಮುನ್ನ ಹಾಗೂ ಸಹಕಾರ ನೀಡಿದ ಇನ್ನೋರ್ವ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಅ.26 ರಂದು ರಾತ್ರಿ ವೇಳೆ ಮೆಲ್ಕಾರ್ ಜಂಕ್ಷನ್ ನಲ್ಲಿ ಶಾರದೋತ್ಸವ ಕಾರ್ಯಕ್ರಮಕ್ಕೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ತೆರವು ಮಾಡುವ ವೇಳೆ ದೇವದಾಸ್ ಮತ್ತು ಶಂಕರ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಚೂರಿಯಿಂದ ಇರಿದು ಪರಾರಿಯಾಗಿದ್ದರು.
ಘಟನೆಯಿಂದ ಗಾಯಗೊಂಡವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ .
ಚೂರಿ ಇರಿದು ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದು,ಇಂದು ಪ್ರಮುಖ ಇಬ್ಬರು ಸೇರಿದಂತೆ ಒಟ್ಟು ಮೂರು ಮಂದಿಯನ್ನು ಬಂಧಿಸಿದ್ದಾರೆ.ಉಳಿದಂತೆ ಘಟನೆಗೆ ಸಂಬಂಧಿಸಿದಂತೆ ಇನ್ನು ಹಲವು ಆರೋಪಿಗಳ ಬಂಧನಕ್ಕೆ ಪೋಲೀಸರು ಮುಂದಾಗಿದ್ದಾರೆ.
ಚೂರಿ ಇರಿತ ಪ್ರಕರಣದ ಮೊದಲು ಎರಡು ತಂಡಗಳ ನಡುವೆ ಪಾಣೆಮಂಗಳೂರು ಶಾರದ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅದರ ಪೂರ್ವದ್ವೇಷದ ಕಾರಣದಿಂದ ಮೆಲ್ಕಾರ್ ನಲ್ಲಿ ಬ್ಯಾನರ್ ತೆಗೆಯುವ ವೇಳೆ ಮತ್ತೆ ಗಲಾಟೆ ನಡೆದಿರುವುದು ಎಂದು ಹೇಳಲಾಗಿದೆ.