BANTWAL
ಸಿಡಿಲು ಗುಡುಗಿನ ಆರ್ಭಟಕ್ಕೆ ನಲುಗಿದ ಬಂಟ್ವಾಳ- ಅಪಾರ ಪ್ರಮಾಣದಲ್ಲಿ ಸೊತ್ತುಗಳು ಹಾನಿ..!
ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಸಿಡಿಲು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಮನೆ ಹಾಗೂ ಇತರ ಸೊತ್ತಗಳಿಗೆ ಹಾನಿಯಾಗಿದೆ.
ಬಂಟ್ವಾಳ: ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಸಿಡಿಲು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಮನೆ ಹಾಗೂ ಇತರ ಸೊತ್ತಗಳಿಗೆ ಹಾನಿಯಾಗಿದೆ.
ಹಾನಿಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ಬಂಟ್ವಾಳ ತಾಲೂಕು ಆಡಳಿತ ವರದಿ ನೀಡಿದೆ.
ತಾಲೂಕಿನ ಬೋಳಂತೂರು ಗ್ರಾಮದ ಸುರಿಬೈಲ್ ಎಂಬಲ್ಲಿ ಅಬ್ದುಲ್ ಖಾದರ್ ರವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದ್ದರೂ,ಯಾವುದೇ ಪ್ರಾಣಾಪಾಯ ಆಗಿಲ್ಲ.
ಬಾಳ್ತಿಲ ಗ್ರಾಮದ ಸುಧೆಕಾರು ಎಂಬಲ್ಲಿ ಶೀನ ಎಂಬವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಆಲಾಡಿ ಗ್ರಾಮದ ಅಬ್ದುಲ್ ರಜಾಕ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಸಾಲೆತ್ತೂರು ಗ್ರಾಮದ ಮೆದು ಕೂಡು ರಸ್ತೆ ಎಂಬಲ್ಲಿ ಹಮೀದ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಬೋಳಂತೂರು ಗ್ರಾಮದ ಅಬ್ದುಲ್ ಖಾದರ್ ಮನೆಗೆ ಸಿಡಿಲು ಬಡಿದಿದೆ.ಇಡ್ಕಿದು ಗ್ರಾಮದ ಅರ್ಕೆಚಾರು ಥೋಮಸ್ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದಿದೆ.
ಎಲ್ಲಾಮನೆಗಳ ವಿದ್ಯುತ್ ವಯರ್ ಸಹಿತ ಇತರ ಪರಿಕರಗಳು ಸುಟ್ಟು ಬೂದಿಯಾಗಿದೆ. ಕೆಲವು ಮನೆಗಳ ಗೋಡೆಗಳು ಬಿರುಕು ಬಿದ್ದ ಪರಿಣಾಮ ಮನೆ ಬೀಳುವ ಸ್ಥಿತಿಯಲ್ಲಿದೆ.
ಇನ್ನು ಕೆಲವು ಹಂಚಿನ ಮನೆಗಳಿಗೆ ಹಾನಿಯಾಗಿದ್ದು ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾಕೃತಿಕ ವಿಕೋಪದಡಿ ಸರಕಾರದ ಪರಿಹಾರ ಧನವನ್ನು ನೀಡುವ ಭರವಸೆ ನೀಡಿದ್ದಾರೆ.ತಾತ್ಕಾಲಿಕ ವಾಗಿ ಅವರಿಗೆ ನಿಲ್ಲುವ ವ್ಯವಸ್ಥೆಯನ್ನು ಕೆಲವು ಕಡೆ ಸ್ಥಳೀಯ ರು ಮಾಡಿದ್ದಾರೆ.