ಅಳಿಯನನ್ನು ಕಡಿದು ಕೊಲೆಗೈದ ಮಾವ
ಬಂಟ್ವಾಳ ಜೂನ್ 2 : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮಾವನೇ ತನ್ನ ಅಳಿಯನನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಮಾಣಿನಾಲ್ಕೂರು ಗ್ರಾಮದ ಕಟ್ಟದಪಡ್ಪು ಎಂಬಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಮಾಣಿನಾಲ್ಕೂರು ನಿವಾಸಿ ರಮಾನಾಂದ ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾವ ಅಮನ್ನ ಪೂಜಾರಿ ತನ್ನ ಅಳಿಯ ರಮಾನಾಂದ ರನ್ನು ಕಡಿದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಗ್ರಾಮಾಂತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
