BANTWAL
ಬಂಟ್ವಾಳದಲ್ಲಿ ತೆಂಗಿನ ಮರಗಳಿಗೆರಗಿದ ಸಿಡಿಲಿಗೆ ಹೊತ್ತಿ ಉರಿದ ಮರಗಳು..!
ಬಂಟ್ವಾಳ : ದಕ್ಷಿಣ ಕನ್ನಡದಲ್ಲಿ ಮಂಗಳವಾರ ಸಂಜೆ ಭಾರಿ ಗುಡುಗು ಸಿಡಿಲಿನ ಮಳೆಯಾಗಿದೆ. ಇದೇ ವೇಳೆ ಬಂಟ್ವಾಳದಲ್ಲಿ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದ ಘಟನೆ ನಡೆದಿದೆ.
ತಾಲೂಕಿನ ಪುಂಜಾಲಕಟ್ಟೆ ಸಮೀಪದ ಕುಕ್ಕಳ ಗ್ರಾಮದ ಮಂಜಲ್ ಪಲ್ಕೆ ಎಂಬಲ್ಲಿ ಸಿಡಿಲು ಬಡಿದಿದ್ದು ಎರಡು ತೆಂಗಿನ ಮರಗಳು ಉರಿಯುವ ದೃಶ್ಯ ಕಂಡು ಬಂದಿದೆ. ಮಂಜಲ್ ಪಲ್ಕೆ ನಿವಾಸಿ ಖಾದರ್ ಎಂಬವರ ಮನೆಯ ಅಂಗಳದಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಎರಡು ತೆಂಗಿನ ಮರಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದಿದೆ. ಆದ್ರೆ ಈ ಘಟನೆಯಿಂದ ಮನೆಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿಗೆ ಒಳಹರಿವಿನಲ್ಲಿ ಏರಿಕೆ ಕಂಡಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 10 ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.