BANTWAL
ಬಂಟ್ವಾಳದಲ್ಲಿ ಗುಡ್ಡ ಜರಿತ, ಸ್ಥಳೀಯರ ಸಕಾಲ ಕಾರ್ಯಾಚರಣೆ ಉಳಿಸಿತು ಇಬ್ಬರು ಕಾರ್ಮಿಕರ ಜೀವ..!
ಬಂಟ್ವಾಳ : ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸೂರಿಕುಮೇರ್ ಸಮೀಪದ ಕಾಯರಡ್ಕ ಎಂಬಲ್ಲಿ ನಡೆದಿದೆ.
ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಮೇಲಿನ ಗುಡ್ಡ ಜರಿದು ಬಿದ್ದಿದೆ.ಗುಡ್ಡ ಜರಿದು ಮಣ್ಣಿನೊಳಗೆ ಇಬ್ಬರು ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದರು.
ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಇಬ್ಬರು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಾಜೇಶ್ ನಾಯ್ಕ್ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ಗುಡ್ಡದಡಿ ಸುಲಿಕಿ ರಕ್ಷಿಸಲ್ಪಟ್ಟ ಕಾರ್ಮಿಕರಾಗಿದ್ದಾರೆ. ಕಾಂಪೌಂಡ್ ನಿರ್ಮಾಣಕ್ಕೆ ಮಣ್ಣು ಅಗೆದು ಪಾಯ ಮಾಡುತ್ತಿದ್ದ ವೇಳೆ ಗುಡ್ಡ ಜರಿದು ಮಣ್ಣಿನೊಳಗೆ ಇವರು ಸಿಲುಕಿದ್ದರು. ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್, ಕಂದಾಯ ಅಧಿಕಾರಿ ವಿಜಯ್ ಭೇಟಿ ನೀಡಿದ್ದಾರೆ.