Connect with us

BANTWAL

ಬಂಟ್ವಾಳ – ಮನೆಯಲ್ಲಿ ಬೆಂಕಿ ಅನಾಹುತಕ್ಕೆ ಅಡುಗೆ ಕೋಣೆ ದಾಸ್ತಾನು ಕೊಠಡಿ ಸಂಪೂರ್ಣ ಭಸ್ಮ

ಬಂಟ್ವಾಳ ಮಾರ್ಚ್ 07: ಆಕಸ್ಮಿಕ ಬೆಂಕಿಗೆ ಮನೆಯ ಅಡುಗೆಕೋಣೆ ಹಾಗೂ ದಾಸ್ತಾನು ಕೊಠಡಿ ಸಂಪೂರ್ಣ ಸುಟ್ಟು ಹೋದ ಘಟನೆ ಜಕ್ರಿಬೆಟ್ಟು ಸಮೀಪದ ಚಂಡ್ತಿಮಾರಿನಲ್ಲಿ ಮಾರ್ಚ್ 6 ರ ತಡರಾತ್ರಿ ನಡೆದಿದೆ.


ಚಂಡ್ತಿಮಾರ್ ನಿವಾಸಿ ಮೋನಪ್ಪ ಪೂಜಾರಿ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕ ಬೆಂಕಿ ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ 2 ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಹೀಗಾಗಿ ಮನೆ ರಕ್ಷಿಸಲ್ಪಟ್ಟಿದೆ‌. ಘಟನೆಯಿಂದ ಯಾವುದೇ ಹಾನಿ ಉಂಟಾಗಿಲ್ಲ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *