BANTWAL
ಬಂಟ್ವಾಳ – ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ತರುತ್ತಿರುವ ವೇಳೆ ಭೀಕರ ರಸ್ತೆ ಅಪಘಾತ – ಚಾಲಕ ಸಾವು

ಬಂಟ್ವಾಳ ಜುಲೈ 05: ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಬರುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಸಾವನಪ್ಪಿದ ಙಟನೆ ತುಂಬೆಯಲ್ಲಿ ಜುಲೈ 5 ರ ಶನಿವಾರ ಮಧ್ಯಾಹ್ನ ನಡೆದಿದೆ.
ಹರೇಕಳ ಪಾವೂರು ನಿವಾಸಿ ನೌಫಾಲ್ ಎಂಬ ಯುವಕ ಮೃತಪಟ್ಟವರೆಂದು ತಿಳಿದುಬಂದಿದೆ. ಬಿಸಿ ರೋಡಿನಲ್ಲಿ ಸೆಕೆಂಡ್ ಕಾರನ್ನು ಖರೀದಿಸಿದ್ದರು. ಕಾರನ್ನು ಬಿಸಿ ರೋಡಿನಿಂದ ತುಂಬೆ ಮೂಲಕ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ಕೆಳಗಿನ ತುಂಬೆಯಲ್ಲಿ ಕಾರು ಡಿವೈಡರ್ ಮೇಲೆ ಹತ್ತಿ ಬಳಿಕ ಮಂಗಳೂರು ಕಡೆಯಿಂದ ಬರುವ ರಸ್ತೆ ಮೇಲೆ ಬಿದ್ದಿದೆ.

ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.